alex Certify
ಕನ್ನಡ ದುನಿಯಾ       Mobile App
       

Kannada Duniya

3 ವರ್ಷದ ಮಗುವನ್ನು ಬಚಾವ್ ಮಾಡಿದೆ ಪಕ್ಕದ ಮನೆಯ ‘ಪ್ರಸಾದ’

ದೆಹಲಿಯಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ-ಪತ್ನಿ ಹಾಗೂ 6 ವರ್ಷದ ಮಗಳು ವಿಷ ಸೇವಿಸಿದ್ದಾರೆ. ಆದ್ರೆ ಪಕ್ಕದ ಮನೆಗೆ ಪೂಜೆಗೆ ತೆರಳಿದ್ದ 3 ವರ್ಷದ ಮಗು ರಿಷಬ್, ಪ್ರಸಾದ ತಿನ್ನದೇ ಅಲ್ಲಿಂದ ಬರಲು ಒಪ್ಪದೇ ಇದ್ದಿದ್ರಿಂದ ಬಚಾವ್ ಆಗಿದ್ದಾನೆ.

ವಿಕ್ಕಿ ಹಾಗೂ ಲಲಿತಾ ದಂಪತಿಯ ಮಕ್ಕಳಾದ 6 ವರ್ಷದ ರಾಂಚಿ ಮತ್ತು 3 ವರ್ಷದ ರಿಷಬ್, ಬೆಳಗ್ಗೆ ಪಕ್ಕದ ಮನೆಯ ಪೂಜೆ ನೋಡಲು ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ಲಲಿತಾ ಮಕ್ಕಳನ್ನು ಕರೆತರಲು ಹೋಗಿದ್ದಾಳೆ. ಆದ್ರೆ ಪ್ರಸಾದ ತಿಂದೇ ಬರುವುದಾಗಿ ಹಠ ಹಿಡಿದ ರಿಷಬ್, ಅಮ್ಮನ ಜೊತೆಗೆ ಮನೆಗೆ ಬಂದಿಲ್ಲ.

ಪಕ್ಕದ ಮನೆಯಲ್ಲೇ ಉಳಿದಿದ್ದಾನೆ. ಮಗಳನ್ನು ಕರೆದುಕೊಂಡು ಬಂದ ಲಲಿತಾ, ಆಕೆಗೂ ವಿಷ ಕೊಟ್ಟು ತಾನೂ ಸೇವಿಸಿದ್ದಾಳೆ. ವಿಕ್ಕಿ ಕೂಡ ಸಾವಿಗೆ ಶರಣಾಗಿದ್ದಾನೆ. ಆಸ್ತಿ ವಿಚಾರಕ್ಕೆ ವಿಕ್ಕಿ ತಂದೆಯ ಜೊತೆಗೆ ಜಗಳವಾಡುತ್ತಿದ್ದ. ಈ ಹಿಂದೆಯೂ ಒಮ್ಮೆ ದಂಪತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

ಶನಿವಾರ ಬೆಳಗ್ಗೆ 10.30 ರ ವೇಳೆಗೆ ವಿಕ್ಕಿ ಹಾಗೂ ಲಲಿತಾ, ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಹೆತ್ತವರನ್ನು ಒತ್ತಾಯಿಸಿದ್ದಾರೆ. ಅದಕ್ಕೆ ಒಪ್ಪದ ವಿಕ್ಕಿ ತಂದೆ ಪೊಲೀಸರನ್ನು ಕರೆಸುವುದಾಗಿ ಹೇಳಿದ್ರು. ಇದ್ರಿಂದ ಕೆರಳಿದ ವಿಕ್ಕಿ ಹಾಗೂ ಲಲಿತಾ ಮಗಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಕ್ಕದ ಮನೆಯ ಪ್ರಸಾದ ರಿಷಬ್ ನನ್ನು ಕಾಪಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...