alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾ ಬೀಚ್ ನಲ್ಲಿ ಪೇದೆ ಸೇರಿದಂತೆ ಮೂವರು ಪ್ರವಾಸಿಗರ ಸಾವು

ಗೋವಾ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರದ ಮೂವರು ಕಲಂಗುಟ್ ಬೀಚ್ ನಲ್ಲಿ ಸಮುದ್ರ ಪಾಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಮೃತರು ಮಹಾರಾಷ್ಟ್ರದ ಅಕೋಲಾ ನಿವಾಸಿಗಳಾಗಿದ್ದು, ಮೃತರ ಪೈಕಿ ಓರ್ವ ಪೊಲೀಸ್ ಪೇದೆಯೂ ಸೇರಿದ್ದಾನೆ. ಇಂದು ಬೆಳಗ್ಗೆ ಗೋವಾಕ್ಕೆ ಬಂದ 14 ಮಂದಿ ಪ್ರವಾಸಿಗಳ ತಂಡ, ಬೆಳಿಗ್ಗೆ ಆರು ಗಂಟೆಗೆ ಕಲಂಗುಟ್ ಬೀಚ್ ನಲ್ಲಿ ಸಮುದ್ರಕ್ಕೆ ಇಳಿದಿದೆ.

ಬೀಚಿನಲ್ಲಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಸಹ ಅದನ್ನು ನಿರ್ಲಕ್ಷಿಸಿ ಇವರುಗಳು ಈಜಾಡಲು ತೆರಳಿದ್ದು, ಭಾರಿ ಅಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ.

ಮೃತಪಟ್ಟವರನ್ನು ಪ್ರೀತೇಶ್ ಲಂಕೇಶ್ವರ್ ನಂದ ಗಾವಳಿ, ಆತನ ಸಹೋದರ ಚೇತನ್ ಲಂಕೇಶ್ವರ್ ನಂದ ಗಾವಳಿ ಹಾಗೂ ಉಜ್ವಲ್ ವಾಕೋಡೆ ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...