alex Certify
ಕನ್ನಡ ದುನಿಯಾ       Mobile App
       

Kannada Duniya

ಓವರ್ ಟೇಕ್ ಮಾಡುವ ಭರದಲ್ಲಿ ಸಾವು ತಂದುಕೊಂಡ ವಿದ್ಯಾರ್ಥಿನಿಯರು

ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿಯೊಂದರ ಬಳಿ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಕಾಲೇಜು ಯುವತಿಯರು ಪ್ರಾಣಬಿಟ್ಟಿರುವ ದಾರುಣ ಘಟನೆ ನಡೆದಿದೆ. ಬೆಳಗ್ಗೆ 8.30 ರ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ವಿಶ್ರುತಿ ಭನ್ವಾರಿ, ಸ್ನೇಹಾ ಮತ್ತು ರೋಚಿಕಾ ಬೋರಿಕರ್ ಎಂಬ ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ.

ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕ್ರೇನ್ ನ ಮೂಲಕ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಮುಂದೆ ಚಲಿಸುತ್ತಿದ್ದ ಕ್ರೇನ್ ನ ಹಿಂಬದಿಯಲ್ಲಿ ಸ್ಕೂಟರ್ ನಲ್ಲಿ ಬರುತ್ತಿದ್ದ ಮೂವರು ಯುವತಿಯರು ಎಡಬದಿಯಿಂದ ಕ್ರೇನ್ ನ ಓವರ್ ಟೇಕ್ ಮಾಡೋಕೆ ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಅವರ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸ್ಕೂಟರ್ ಕ್ರೇನ್ ಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ.

ಸ್ಥಳದಲ್ಲಿ ಮೂವರು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ತೀವ್ರ ರಕ್ತಸ್ರಾವವಾದ ಪರಿಣಾಮ ಯುವತಿಯರು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರದಲ್ಲಿ ಪೊಲೀಸರು ಪೋಷಕರಿಗೆ ಯುವತಿಯರ ಮೃತ ದೇಹಗಳನ್ನ ಹಸ್ತಾಂತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...