alex Certify
ಕನ್ನಡ ದುನಿಯಾ       Mobile App
       

Kannada Duniya

ಕೀನ್ಯಾದಲ್ಲಿ ಬಂಧಿಯಾಗಿದ್ದ ಭಾರತೀಯ ಯುವತಿಯರ ರಕ್ಷಣೆ

ಕೀನ್ಯಾದಲ್ಲಿ ಬಂಧಿಯಾಗಿದ್ದ ಮೂವರು ಭಾರತೀಯರು ಹಾಗೂ 7 ಮಂದಿ ನೇಪಾಳಿ ಯುವತಿಯರನ್ನು ರಕ್ಷಣೆ ಮಾಡಲಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗುರುವಾರದಂದು ಸರಣಿ ಟ್ವೀಟ್ ಮಾಡುವ ಮೂಲಕ  ಈ ವಿಚಾರವನ್ನು ತಿಳಿಸಿದ್ದಾರೆ. ಮಾನವ ಕಳ್ಳ ಸಾಗಾಣಿಕೆದಾರರ ಜಾಲಕ್ಕೆ ಸಿಲುಕಿ ಈ ಯುವತಿಯರು ಕೀನ್ಯಾಕ್ಕೆ ತೆರಳಿದ್ದು, ಇವರುಗಳ ಬಳಿಯಿದ್ದ ಪಾಸ್ಪೋರ್ಟ್ ಹಾಗೂ ಪೋನ್ ಗಳನ್ನು ಕಸಿದುಕೊಂಡು ಮೊಂಬಸಾದಲ್ಲಿ ಬಂಧಿಯಾಗಿರಿಸಲಾಗಿತ್ತು.

ಇವರುಗಳ ಬಿಡುಗಡೆಗೆ ಕೀನ್ಯಾದ ಭಾರತೀಯ ರಾಯಭಾರ ಕಚೇರಿ ಸಫಲವಾಗಿದ್ದು, ಹೈಕಮೀಷನರ್ ಸುಚಿತ್ರ ದೊರೈ ಹಾಗೂ ಪ್ರಥಮ ಕಾರ್ಯದರ್ಶಿ ಕರಣ್ ಯಾದವ್ ಅವರ ಕಾರ್ಯವನ್ನು ಸುಷ್ಮಾ ಸ್ವರಾಜ್ ಶ್ಲಾಘಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರು ಬಿಡುಗಡೆಗೊಂಡಿರುವ ಯುವತಿಯರ ಮಾಹಿತಿಯನ್ನು ಪಂಜಾಬ್ ಸರ್ಕಾರದೊಂದಿಗೆ ಹಂಚಿಕೊಂಡಿದ್ದು, ಯುವತಿಯರನ್ನು ಕೀನ್ಯಾಕ್ಕೆ ಕಳುಹಿಸಿದ್ದ ಟ್ರಾವೆಲ್ ಏಜೆಂಟ್ ಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...