alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಟೆಲ್ ನಲ್ಲಿ ಗೆಳೆಯನ ಪ್ರಜ್ಞೆ ತಪ್ಪಿಸಿದ ವಿದ್ಯಾರ್ಥಿನಿಯರು ಮಾಡಿದ್ದೇನು ಗೊತ್ತಾ…?

ಲಖ್ನೋ: ಹೋಟೆಲ್ ಗೆ ಉದ್ಯಮಿಯಾಗಿರುವ ಗೆಳೆಯನೊಂದಿಗೆ ಆಗಮಿಸಿದ್ದ ಸೋದರಿಯರು ಆತನ ಪ್ರಜ್ಞೆ ತಪ್ಪಿಸಿ ಹಣ ಹಾಗೂ ಬೆಲೆಬಾಳುವ ವಸ್ತು ದೋಚಿ ಪರಾರಿಯಾಗಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಘಟನೆ ನಡೆದಿದ್ದು, ಕೃತ್ಯವೆಸಗಿದ ರಾಜಸ್ಥಾನದ ಬಿಕಾನೆರ್ ಮೂಲದ ವಿಜಯಲಕ್ಷ್ಮಿ(25), ಆಕೆಯ ಸಹೋದರಿ ಕೃಷ್ಣಾ(21) ಮತ್ತು ಸೋದರಸಂಬಂಧಿ ಬುಲಂದಶಹರ್ ನ ಸುನಿತಾ(27) ಅವರನ್ನು ಬಂಧಿಸಲಾಗಿದೆ.

ಪತಿ ಕಳೆದುಕೊಂಡಿರುವ ಸುನೀತಾ ವಿಧವೆಯಾಗಿದ್ದು, ರಿಸೆಪ್ಷನಿಸ್ಟ್ ಆಗಿ ಕೆಲಸಮಾಡುತ್ತಿದ್ದಳು. ವಿಜಯಲಕ್ಷ್ಮಿ ಮತ್ತು ಕೃಷ್ಣಾ ವಿದ್ಯಾರ್ಥಿನಿಯರಾಗಿದ್ದಾರೆ. ಉದ್ಯಮಿಯೊಂದಿಗೆ ಗೆಳೆತನ ಬೆಳೆಸಿದ ಈ ಮೂವರು ಆತನನ್ನು ಹೋಟೆಲ್ ಗೆ ಆಹ್ವಾನಿಸಿದ್ದಾರೆ.

ಹೋಟೆಲ್ ನಲ್ಲಿ ಸ್ನೇಹಿತನಿಗೆ ಹೆಚ್ಚು ಮದ್ಯ ಕುಡಿಸಿ ಪ್ರಜ್ಞೆ ತಪ್ಪಿದ ಬಳಿಕ ಆತನ ಬಳಿಯಿದ್ದ ಹಣ ಹಾಗೂ ಬೆಲೆಬಾಳುವ ವಸ್ತು ದೋಚಿದ್ದಾರೆ. 2 ವಾಚ್, ಕಾರಿನ ದಾಖಲೆ, 2 ಮೊಬೈಲ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂ. ಡೆಬಿಟ್ ಕಾರ್ಡ್ ಬಳಸಿ 4,500 ರೂ., ಪೇಟಿಎಂ ಮೂಲಕ 26,000 ರೂ. ಪಡೆದುಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಮೂವರನ್ನು ಬಂಧಿಸಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಾಜ್ಯ ಸರ್ಕಾರ ಪತನಗೊಳಿಸುವ ಪ್ರಯತ್ನದ ಹಿಂದಿದೆಯಾ ಬಿಜೆಪಿ ನಾಯಕರ ಪಾತ್ರ...?

    View Results

    Loading ... Loading ...