alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಹೊಡೆದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ರು

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ವಾಕಾಡಿ ಗ್ರಾಮದಲ್ಲಿ ಮುಜುಗರದ ಘಟನೆ ನಡೆದಿದೆ. ಮೂವರು ದಲಿತ ಯುವಕರು ಗ್ರಾಮದ ಕೆರೆಯಲ್ಲಿ ಸ್ನಾನ ಮಾಡಿದ್ದೇ ತಪ್ಪಾಗಿದೆ. ಕೆರೆಯಲ್ಲಿ ಸ್ನಾನ ಮಾಡಿದ ಯುವಕರಿಗೆ ಹೊಡೆದು ಬೆತ್ತಲೆಯಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.

ಘಟನೆ ಜೂನ್ 10 ರಂದು ನಡೆದಿದೆ. ಆದ್ರೆ ವಿಡಿಯೋ ವೈರಲ್ ಆದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಚಿವ ದಿಲೀಪ್ ಕಾಂಬ್ಳೆ ಹೇಳಿದ್ದಾರೆ.

ಎಸ್ಸಿ/ಎಸ್ಟಿ ಕಾಯ್ದೆ ಅಡಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಮೂಲಗಳ ಪ್ರಕಾರ ಬಿಸಿಲಿದ್ದ ಕಾರಣ ಯುವಕರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದರಂತೆ. ಅದನ್ನು ಗ್ರಾಮದ ಕೆಲವರು ನೋಡಿದ್ದಾರೆ. ಅವ್ರನ್ನು ಕೆರೆಯಿಂದ ಹೊರಗೆಳೆದು ಚರ್ಮದ ಬೆಲ್ಟ್ ನಲ್ಲಿ ಹೊಡೆದಿದ್ದಾರೆ. ನಂತ್ರ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಘಟನೆ ನಂತ್ರ ಯುವಕರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...