alex Certify
ಕನ್ನಡ ದುನಿಯಾ       Mobile App
       

Kannada Duniya

2ಜಿ ಸ್ಪೆಕ್ಟ್ರಂ ಹಗರಣ : ಎ.ರಾಜಾ, ಕನಿಮೋಳಿ ಸೇರಿ 17 ಮಂದಿ ಖುಲಾಸೆ

ದೇಶದ ಅತಿ ದೊಡ್ಡ ಹಗರಣಗಳಲ್ಲಿ ಒಂದಾದ 2ಜಿ ಸ್ಪೆಕ್ಟ್ರಂ ಪ್ರಕರಣದ ತೀರ್ಪು ಹೊರಬಿದ್ದಿದೆ. 6 ವರ್ಷಗಳ ನಂತ್ರ ಕೋರ್ಟ್ ಈ ಪ್ರಕರಣದ ಬಗ್ಗೆ ಬಹುದೊಡ್ಡ ತೀರ್ಪು ನೀಡಿದೆ. ಗುರುವಾರ ಪಟಿಯಾಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಮಾಜಿ ಸಚಿವ ಎ.ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಸೇರಿದಂತೆ ಎಲ್ಲ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

2008ರಲ್ಲಿ 2ಜಿ ಸ್ಪೆಕ್ಟ್ರಂ  ಹಗರಣ ಸದ್ದು ಮಾಡಿತ್ತು. 1 ಲಕ್ಷ 76 ಸಾವಿರ ಕೋಟಿ ಹಗರಣ ಇದಾಗಿತ್ತು. ಸಿಇಜಿ ನೀಡಿದ್ದ ವರದಿ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಪೊಲೀಸರು ಎ.ರಾಜಾ ಹಾಗೂ ಕನಿಮೋಳಿ ಸೇರಿದಂತೆ 17 ಮಂದಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

ಗುರುವಾರ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹೊರ ಬಂದ ರಾಜಾ ಪರ ವಕೀಲರು, ಆರೋಪಿ ಎನ್ನಲಾಗಿದ್ದವರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಗಳಿರಲಿಲ್ಲ. ಹಣಕಾಸು ವ್ಯವಹಾರ ನಡೆದಿರುವ ಬಗ್ಗೆ ಪುರಾವೆಯಿಲ್ಲ. ಹಾಗಾಗಿ 17 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದಿದ್ದಾರೆ. ಎ.ರಾಜಾ, ಕನಿಮೋಳಿ ದೋಷಮುಕ್ತರಾಗ್ತಿದ್ದಂತೆ ಕೋರ್ಟ್ ಆವರಣದಲ್ಲಿ ನೆರೆದಿದ್ದ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಖುಷಿ ಹಂಚಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...