alex Certify
ಕನ್ನಡ ದುನಿಯಾ       Mobile App
       

Kannada Duniya

5330 ಕಿಮೀ ಸುತ್ತಾಡಿ ಬಂಗಾಳಕ್ಕೆ ಬಂದಿದೆ ರೊಹಿಂಗ್ಯಾಗಳ ತಂಡ

ರೋಹಿಂಗ್ಯಾಗಳು ಆಶ್ರಯ ಅರಸಿ ದೇಶದಿಂದ ದೇಶಕ್ಕೆ ಸುತ್ತಾಡ್ತಿದ್ದಾರೆ. 29 ರೊಹಿಂಗ್ಯಾಗಳ ತಂಡವೊಂದು 5330 ಕಿಮೀ ದೂರ ಪ್ರಯಾಣ ಮಾಡಿ ಪಶ್ಚಿಮ ಬಂಗಾಳದ ಗ್ರಾಮವೊಂದಕ್ಕೆ ಬಂದಿದೆ. ಸತತ 4 ತಿಂಗಳುಗಳ ಕಾಲ ಮೂರು ದೇಶಗಳನ್ನು ಸುತ್ತಾಡಿ ಕೊನೆಗೆ ರೊಹಿಂಗ್ಯಾ ಕಾಲೋನಿಗೆ ಬಂದಿದ್ದಾರೆ.

ಬರುಯ್ಪುರ್ ನ ಕುರುಲಿ ಎಂಬಲ್ಲಿ ರೊಹಿಂಗ್ಯಾ ಕಾಲೋನಿಯೇ ಇದೆ. ಕೋಲ್ಕತ್ತಾದಿಂದ 45 ಕಿಮೀ ದೂರವಿರೋ ಈ ಗ್ರಾಮದಲ್ಲಿ 29 ಮಂದಿ ಮ್ಯಾನ್ಮಾರ್ ನಿಂದ ಬಂದಿರೋ ನಿರಾಶ್ರಿತರು ತಂಗಿದ್ದಾರೆ. ಇದೇ ತಮ್ಮ ಮೂಲ ನಿವಾಸ ಸ್ಥಳ ಅನ್ನೋದು ಅವರ ವಾದ.

ಸ್ಥಳೀಯರು ಹಾಗೂ ಒಂದು ಎನ್ ಜಿ ಓ ರೊಹಿಂಗ್ಯಾಗಳನ್ನು ಬೆಂಬಲಿಸಿದೆ. ಗ್ರಾಮಸ್ಥರೇ ನಿರಾಶ್ರಿತರಿಗಾಗಿ ಪುಟ್ಟ ಮನೆ ಹಾಗೂ ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮನೆಗೆ ವಿದ್ಯುತ್, ಅಡುಗೆ ಸಾಮಗ್ರಿ, ಆಹಾರ ಬಟ್ಟೆ ಎಲ್ಲವನ್ನೂ ಒದಗಿಸಿದ್ದಾರೆ.

29 ಜನರ ಪೈಕಿ ಕೆಲವರು ದೆಹಲಿ, ಹರಿಯಾಣ ಮತ್ತು ಹೈದ್ರಾಬಾದ್ ಮೂಲದವರು ಅಂತಾ ಹೇಳಲಾಗ್ತಿದೆ. ಅವರ ಗುರುತಿನ ಚೀಟಿಗಳನ್ನೆಲ್ಲ ಪೊಲೀಸರು ಈಗಾಗ್ಲೇ ಪರಿಶೀಲನೆ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...