alex Certify
ಕನ್ನಡ ದುನಿಯಾ       Mobile App
       

Kannada Duniya

285 ಭಾರತೀಯರನ್ನು ಟಾರ್ಗೆಟ್ ಮಾಡಿದ ಐಸಿಸ್

sisi lk

ಮುಂಬೈ: ತಮ್ಮ ಕರಾಳ ಕೃತ್ಯಗಳ ಮೂಲಕ ವಿಶ್ವದ ನೆಮ್ಮದಿಗೆ ಭಂಗ ತಂದಿರುವ, ಐಸಿಸ್ ಸದೆ ಬಡಿಯಲು ಈಗಾಗಲೇ ಕಾರ್ಯಾಚರಣೆ ಆರಂಭವಾಗಿದೆ. ಹೀಗಿದ್ದರೂ, ಐಸಿಸ್ ಮೇಲುಗೈ ಸಾಧಿಸಿ ಮರಳಿ ತನ್ನ ವಶದಲ್ಲಿದ್ದ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದೆ.

 

ಒಂದೊಮ್ಮೆ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿದ್ದ ಐಸಿಸ್ ಕ್ರೂರ, ಹಿಂಸಾತ್ಮಕ ಚಟುವಟಿಕೆ ಮೂಲಕ ಆತಂಕಕ್ಕೆ ಕಾರಣವಾಗಿದೆ. ಇಂತಹ ಐಸಿಸ್ ಹಿಟ್ ಲಿಸ್ಟ್ ನಲ್ಲಿ 285 ಭಾರತೀಯರಿದ್ದಾರೆ. ಅಂತರ್ಜಾಲದಲ್ಲಿ ಐಸಿಸ್ ಸಿದ್ಧಪಡಿಸಿರುವ ಹಿಟ್ ಲಿಸ್ಟ್ ನಲ್ಲಿ 4000ಕ್ಕೂ ಅಧಿಕ ಮಂದಿಯ ಹೆಸರಿದ್ದು, ಅವರಲ್ಲಿ 285 ಭಾರತೀಯರನ್ನು ಟಾರ್ಗೆಟ್ ಮಾಡಲಾಗಿದೆ. ಐಸಿಸ್ ಹಿಟ್ ಲಿಸ್ಟ್ ನಲ್ಲಿ ಹೆಸರಿಸಲಾಗಿರುವ ವ್ಯಕ್ತಿಗಳ ಹೆಸರನ್ನು ಅಡ್ರೆಸ್ ಸಮೇತ ಪ್ರಕಟಿಸಲಾಗಿದ್ದು, ಇದು ಆತಂಕ ಹೆಚ್ಚಲು ಕಾರಣವಾಗಿದೆ.

 

ಐಸಿಸ್ ಉಗ್ರ ಸಂಘಟನೆಯ ಖಾಸಗಿ ಚಾನೆಲ್ ಟಿಲಿಗ್ರಾಮ್ ಆಪ್ ಜಾಲತಾಣದಲ್ಲಿ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಅದರಲ್ಲಿ ಕ್ರಮಬದ್ಧವಾಗಿ ಹೆಸರುಗಳನ್ನು ಹಾಕಲಾಗಿದ್ದು, ಅಮೆರಿಕ, ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳ ಗಣ್ಯರು, ಪ್ರಮುಖರ ಹೆಸರನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...