alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯನ ಸಾವಿಗೆ ಕಾರಣವಾಯ್ತಾ ಡ್ರಗ್ ಓವರ್ ಡೋಸ್..?

28ರ ಹರೆಯದ ವೈದ್ಯನೊಬ್ಬ ದೆಹಲಿಯ ದಿಲ್ ಶಾದ್ ಗಾರ್ಡನ್ ನಲ್ಲಿರೋ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ತಮಿಳುನಾಡಿನ ಕೊಯಂಬತ್ತೂರು ಮೂಲದ ಶರತ್ ಬಾಬು ಗುರು ತೇಜ್ ಬಹಾದುರ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ.

ಶರತ್ ನ ಇಬ್ಬರು ಫ್ಲಾಟ್ ಮೇಟ್ ಗಳು ಕೂಡ ವೈದ್ಯರು. ಬೆಳಗ್ಗೆ 7 ಗಂಟೆ ವೇಳೆಗೆ ಶರತ್ ಸ್ನಾನದ ಕೋಣೆಯ ಬಳಿ ಬಿದ್ದಿದ್ದ. ಶವದ ಪಕ್ಕದಲ್ಲೇ ಸಿರಿಂಜ್ ಒಂದು ಪತ್ತೆಯಾಗಿದೆ. ಆದ್ರೆ ವೈದ್ಯನ ಸಾವಿಗೆ ಕಾರಣ ಏನು ಅನ್ನೋದು ಸ್ಪಷ್ಟವಾಗಿಲ್ಲ.

ಶರತ್ ಪ್ರಜ್ಞೆತಪ್ಪಿಬಿದ್ದಿದ್ದಾನೆ ಎಂದುಕೊಂಡ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಕರೆತಂದಿದ್ರು. ಆದ್ರೆ ಅಷ್ಟರಲ್ಲಾಗ್ಲೇ ಆತ ಮೃತಪಟ್ಟಿದ್ದ. ಡ್ರಗ್ ಓವರ್ ಡೋಸ್ ನಿಂದ ಸಾವನ್ನಪ್ಪಿರಬಹುದು ಅನ್ನೋ ಅನುಮಾನ ವ್ತಕ್ತವಾಗಿದೆ. ರಾತ್ರಿ 10.30ರ ವೇಳೆಗ ಊಟ ಮುಗಿಸಿ ಶರತ್ ಮಲಗಲು ಕೋಣೆಗೆ ತೆರಳಿದ್ದ. ನಂತರ ಏನಾಯ್ತು ಅನ್ನೋದು ಆತನ ಫ್ಲಾಟ್ ಮೇಟ್ ಗಳಿಗೂ ಗೊತ್ತಿಲ್ಲ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...