alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಪತ್ನಿಯ ಶವದೊಂದಿಗೆ 8 ಗಂಟೆಗಳ ಕಾಲ ಸುತ್ತಾಡಿದ್ದ ಪತಿ

ಮುಂಬೈನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ತನ್ನ ಪತ್ನಿಯ ಶವವನ್ನು ಕಾರಿನಲ್ಲಿರಿಸಿಕೊಂಡು ಎಂಟು ಗಂಟೆಗಳ ಕಾಲ ಊರೆಲ್ಲಾ ಸುತ್ತಾಡಿದ್ದಾನೆ.

ಜೂನ್ 6 ರಂದು ಈ ಘಟನೆ ನಡೆದಿದ್ದು, 28 ವರ್ಷದ ಸೋಕ್ಲಾರಾಮ್ ಪುರೋಹಿತ್ ಎಂಬಾತನ ಪತ್ನಿ ಮಣಿ ಬೆನ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಸೋಕ್ಲಾರಾಮ್, ಪತ್ನಿಯ ಶವವನ್ನು ಕಾರಿನಲ್ಲಿರಿಸಿಕೊಂಡಿದ್ದಾನೆ.

ಬಳಿಕ ಸಾಕಿನಾಕದಲ್ಲಿರುವ ತನ್ನ ಮನೆಯಿಂದ ಸಮೀಪದ ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯರು ಆತನ ಪತ್ನಿ ಈಗಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಬಳಿಕ ಮತ್ತೊಂದು ಆಸ್ಪತ್ರೆಗೆ ತೆರಳಿದ್ದು, ಅಲ್ಲಿನ ವೈದ್ಯರು ಇದನ್ನೇ ಹೇಳಿದ್ದಾರೆ. ಅಂಧೇರಿಯಿಂದ ಬೊರಿವಿಲಿವರೆಗೆ ಎಂಟು ಗಂಟೆಗಳ ಕಾಲ ಕಾರಿನಲ್ಲೇ ಪತ್ನಿಯ ಶವವನ್ನು ಇರಿಸಿಕೊಂಡು ಅಡ್ಡಾಡಿದ ಸೋಕ್ಲಾರಾಮ್, ಕಡೆಗೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾನೆ.

ಅಲ್ಲಿನ ವೈದ್ಯರು, ಮಹಿಳೆ ಸಾವನ್ನಪ್ಪಿದ ಕುರಿತು ತಿಳಿಸಿದ್ದಲ್ಲದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೊದಲಿಗೆ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸೋಕ್ಲಾರಾಮ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿದ್ದಾರೆ. ದಂಪತಿಗಳಿಗೆ ಮಕ್ಕಳಿರಲಿಲ್ಲವೆನ್ನಲಾಗಿದ್ದು, ಈ ಕಾರಣಕ್ಕೆ ಸೋಕ್ಲಾರಾಮ್ ಪದೇ ಪದೇ ಪತ್ನಿಯನ್ನು ನಿಂದಿಸುತ್ತಿದ್ದನೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...