alex Certify
ಕನ್ನಡ ದುನಿಯಾ       Mobile App
       

Kannada Duniya

2700 ರೂಪಾಯಿಗೆ ನೋಡಿ ಬನ್ನಿ ಮನಾಲಿ– ಲೇಹ್

DSC0332_0ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರಿಗೊಂದು ಉಡುಗೊರೆ ನೀಡಿದೆ. ಮನಾಲಿ– ಲೇಹ್ ವಿಶೇಷ ಬಸ್ ಸಂಚಾರ ಶುರುಮಾಡಿದೆ. 35 ಆಸನಗಳ ಸ್ಪೆಷಲ್ ಬಸ್ ಗೆ ಪ್ರಯಾಣಿಕ 2700 ರೂಪಾಯಿ ನೀಡಿದ್ರೆ ಮುಗೀತು. ಆಹಾರ, ವಸತಿ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಪ್ರವಾಸೋದ್ಯಮ ಇಲಾಖೆಯೇ ಎಲ್ಲ ವ್ಯವಸ್ಥೆ ನೋಡಿಕೊಳ್ಳಲಿದೆ.

ಸುಮಾರು 500 ಕಿಲೋಮೀಟರ್ ದೂರದ ಮಾರ್ಗದಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಅದ್ಭುತ ಕಣಿವೆಗಳು, ಹಿಮನದಿಗಳು ಪ್ರವಾಸಿಗರ ಮನಸೂರೆಗೊಳ್ಳಲಿವೆ. HPTDC ಮನಾಲಿ ಕಚೇರಿಯಿಂದ ಬೆಳಿಗ್ಗೆ 9 ಗಂಟೆಗೆ ಬಸ್ ಮನಾಲಿ ಬಿಡಲಿದೆ. 30 ನಿಮಿಷ ಮೊದಲೇ ಪ್ರವಾಸಿಗರು ಬಸ್ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಸಂಜೆ 7 ಗಂಟೆಗೆ ಬಸ್ ಲೇಹ್ ತಲುಪಲಿದೆ.

ಜುಲೈ ಒಂದರಿಂದ ( ಇಂದಿನಿಂದ) ಬಸ್ ಸಂಚಾರ ಶುರುವಾಗಿದೆ. ಜುಲೈ ಐದರಂದು ಬಸ್ ವಾಪಸ್ ಮನಾಲಿಗೆ ಬರಲಿದೆ. ಮತ್ತೆ ಜುಲೈ ಮೂರರಂದು ಮತ್ತೊಂದು ಬಸ್ ಮನಾಲಿ ಬಿಡಲಿದೆ. ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿದೆ. ಪ್ರವಾಸಿಗರಿಗೆ ಕಡಿಮೆ ದರದಲ್ಲಿ ಸೇವೆ ಒದಗಿಸುವ ಉದ್ದೇಶದಿಂದ ಈ ಬಸ್ ಬಿಟ್ಟಿರುವುದಾಗಿ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...