alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಸ್ ಅಧಿಕಾರಿಯ ಸೌಂದರ್ಯಕ್ಕೆ ಮನಸೋತು ಮನೆಬಿಟ್ಟು ಬಂದ್ಲು ಯುವತಿ

ಸಾಮಾನ್ಯವಾಗಿ ಚಿತ್ರ ನಟ-ನಟಿಯರು, ಕ್ರೀಡಾಪಟುಗಳಿಗೆ ಮಾತ್ರ ಅಭಿಮಾನಿಗಳು ಇರುತ್ತಾರೆಂದು ಹೇಳಲಾಗುತ್ತೆ. ಆದರೆ ಪಂಜಾಬ್ ಯುವತಿಯೊಬ್ಬಳಿಗೆ ಮಾತ್ರ ಮಧ್ಯಪ್ರದೇಶದ ಯುವ ಐಪಿಎಸ್ ಅಧಿಕಾರಿಯ ಮೇಲೆ ಕ್ರಶ್ ಆಗಿದೆ. ಹೀಗಾಗಿ ಆಕೆ ತನ್ನ ನೆಚ್ಚಿನ ಅಧಿಕಾರಿಯನ್ನು ಭೇಟಿ ಮಾಡಲು ಮನೆ ಬಿಟ್ಟು ಬಂದಿದ್ದಾಳೆ.

ಉಜ್ಜಯನಿಯ ಜಿಲ್ಲಾ ರಕ್ಷಣಾಧಿಕಾರಿಯಾಗಿರುವ 34 ವರ್ಷದ ಸಚಿನ್ ಅತುಲ್ಕರ್ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಫಿದಾ ಆಗಿರುವ ಈ ಯುವತಿ, ಮನೆಯಲ್ಲಿ ಹೇಳದೆ ಕೇಳದೆ ಪಂಜಾಬಿನ ಹೋಷಿಯಾರ್ಪುರದಿಂದ ಉಜ್ಜಯಿನಿಗೆ ಆಗಮಿಸಿದ್ದಾಳೆ.

ಸಚಿನ್ ಅವರನ್ನು ಭೇಟಿಯಾಗಲು ಯುವತಿ ಪಟ್ಟು ಹಿಡಿದಿದ್ದು, ಆಕೆಯನ್ನು ವಾಪಸ್ ಊರಿಗೆ ಕಳುಹಿಸಲು ಪೊಲೀಸರು ಮಾಡಿರುವ ಪ್ರಯತ್ನ ವ್ಯರ್ಥವಾಗಿದೆ. ಪಂಜಾಬಿನಿಂದ ಆಗಮಿಸಿರುವ ಆಕೆಯ ಪೋಷಕರು ಮನವೊಲಿಸಲು ಯತ್ನಿಸಿದರೂ ಆಕೆ ಸ್ಪಂದಿಸಿಲ್ಲವೆನ್ನಲಾಗಿದೆ.

ಸಚಿನ್ ಅತುಲ್ಕರ್ ಸುಂದರವಾಗಿರುವುದಷ್ಟೇ ಅಲ್ಲ, ಸದೃಢ ಮೈಕಟ್ಟನ್ನೂ ಹೊಂದಿದ್ದಾರೆ. ಇನ್ನೂ ಅವಿವಾಹಿತರಾಗಿರುವ ಸಚಿನ್ ಅವರಿಗೆ ಹಲವು ಯುವತಿಯರು ಮನಸೋತಿದ್ದಾರೆನ್ನಲಾಗಿದೆ. ಇವರುಗಳ ಪೈಕಿ ಒಬ್ಬಳಾಗಿರುವ ಈ ಯುವತಿಗೆ ಈಗ ಕೌನ್ಸೆಲಿಂಗ್ ಮಾಡಿಸಿ ವಾಪಾಸ್ ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...