alex Certify
ಕನ್ನಡ ದುನಿಯಾ       Mobile App
       

Kannada Duniya

ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಯಾನಕ ರಹಸ್ಯ ಬಿಚ್ಚಿಟ್ಟ ಹೆಡ್ಲಿ

2611-david-headley-ibn-380

ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ಕೈವಾಡವಿದೆ ಎಂದು ಅಮೆರಿಕಾದ ನ್ಯಾಯಾಲಯದಲ್ಲಿ ಈಗಾಗಲೇ ಒಪ್ಪಿಕೊಂಡಿರುವ ಆರೋಪಿ ಡೇವಿಡ್ ಹೆಡ್ಲಿ, ಸೋಮವಾರ ಮತ್ತಷ್ಟು ರಹಸ್ಯಗಳನ್ನು ಬಿಚ್ಚಿಟ್ಟಿದ್ದು ಪಾಕ್ ನ ಕೈವಾಡ ಮತ್ತೊಮ್ಮೆ ಸ್ಪಷ್ಟವಾದಂತಾಗಿದೆ.

ಅಮೆರಿಕ ಜೈಲಿನಲ್ಲಿರುವ ಹೆಡ್ಲಿಯ ವಿಚಾರಣೆಯನ್ನು ಮುಂಬೈ ಕೋರ್ಟ್, ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಸುತ್ತಿದ್ದು ಈ ಸಮಯದಲ್ಲಿ ಆತ, ತಾನು ಲಷ್ಕರ್ ಇ-ತೈಯ್ಬಾ ಸಂಘಟನೆಯ ಹಿಂಬಾಲಕನಾಗಿರುವುದು ಹೌದು. ಅಷ್ಟೇ ಅಲ್ಲ, ಲಷ್ಕರ್ ಇ-ತೈಯ್ಬಾ ಹಿಂಬಾಲಿಸಲು ಆರಂಭಿಸಿದ ಬಳಿಕ ‘ಡೇವಿಡ್ ಹೆಡ್ಲಿ’ ಎಂದು ಹೆಸರು ಬದಲಾಯಿಸಿಕೊಂಡಿದ್ದೆ ಎಂದು ತಿಳಿಸಿದ್ದಾನೆ.

ಅಲ್ಲದೇ ಈ ಹೆಸರು ಬದಲಾವಣೆಯನ್ನು ನನ್ನ ಸಹೋದ್ಯೋಗಿ ಸಾಜಿದ್ ಮಿರ್ ಬಳಿ ಹೇಳಿದ್ದು, ಇದರಿಂದ ನನಗೆ ಭಾರತ ಪ್ರವೇಶಿಸಲು ಸಾಧ್ಯವಾಯಿತು ಎಂದಿರುವ ಹೆಡ್ಲಿ, ಮುಂಬೈ ದಾಳಿ ಘಟನೆಗೂ ಮೊದಲು, ಅಂದರೆ ಹೊಸ ಪಾಸ್ ಪೋರ್ಟ್ ಪಡೆದ ಬಳಿಕ 8 ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗಳ ಪೈಕಿ ಏಳು ಬಾರಿ ಪಾಕಿಸ್ತಾನದಿಂದಲೇ ನೇರವಾಗಿ ಮುಂಬೈಗೆ ಆಗಮಿಸಿದ್ದೆ. ಇನ್ನೊಂದು ಬಾರಿ ಯುಎಇ ಯಿಂದ ಆಗಮಿಸಿದ್ದೆ. ಈ ಸಮಯದಲ್ಲಿ ಮುಂಬೈ ನಗರದ ವಿಡಿಯೋ ಮಾಡಿಕೊಳ್ಳಲು ಸಾಜಿದ್ ನನಗೆ ಸಲಹೆ ನೀಡಿದ್ದ ಎಂದು ವಿವರಿಸಿದ್ದಾನೆ.

ಮುಂಬೈ ದಾಳಿಯ ಬಳಿಕ ಮತ್ತೆ ನಾನು 2009 ರ ಮಾರ್ಚ್ 7ರಂದು ಭಾರತಕ್ಕೆ ಬಂದಿದ್ದೆ ಎಂಬ ಸತ್ಯವನ್ನು ಹೊರ ಹಾಕಿರುವ ಹೆಡ್ಲಿ, ವೀಸಾ ಮಾಡಿಸಿಕೊಳ್ಳಲು ತಂದೆ-ತಾಯಿ ಹೆಸರು, ನನ್ನ ವಿಳಾಸ, ಜನ್ಮ ದಿನಾಂಕ ಸೇರಿದಂತೆ ಎಲ್ಲವನ್ನೂ ತಪ್ಪಾಗಿ ನೀಡಿ ಲಾಹೋರ್​ ನಿಂದ ದೆಹಲಿಗೆ ಆಗಮಿಸಿದ್ದೆ ಎಂದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...