alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತರಿಗೆ ಅಪ್ಪಿತಪ್ಪಿಯೂ ವಾಹನ ಕೊಟ್ಟೀರಿ ಜೋಕೆ…!

ಅಪ್ರಾಪ್ತರಿಗೆ ವಾಹನ ಚಾಲನೆಗೆ ಅನುಮತಿ ನೀಡಿದ್ದ 26 ಮಂದಿ ಪೋಷಕರು ಹೈದ್ರಾಬಾದ್ ನಲ್ಲಿ ಜೈಲು ಸೇರಿದ್ದಾರೆ. ಮಾರ್ಚ್ ನಿಂದ ಏಪ್ರಿಲ್ 23 ರವರೆಗೆ ಬರೋಬ್ಬರಿ 273 ಅಪ್ರಾಪ್ತರು ವಾಹನ ಚಲಾಯಿಸಿದ ಪ್ರಕರಣಗಳನ್ನು ಹೈದ್ರಾಬಾದ್ ಟ್ರಾಫಿಕ್ ಪೊಲೀಸರು ದಾಖಲಿಸಿದ್ದಾರೆ. ಅವರಲ್ಲಿ ಅಪ್ರಾಪ್ತರ 26 ಮಂದಿ ಪೋಷಕರು  ಜೈಲು ಸೇರಿದ್ದಾರೆ.

ಅಲ್ಲದೇ ಒಬ್ಬ ಅಪ್ರಾಪ್ತನನ್ನು ಕೂಡ ಕೋರ್ಟ್ ಆದೇಶದಂತೆ ಜೈಲಿಗಟ್ಟಲಾಗಿತ್ತು. ಅಪ್ರಾಪ್ತರು ವಾಹನ ಚಲಾಯಿಸುವುದರಿಂದಲೇ ಅಪಘಾತದ ಪ್ರಮಾಣ ಹೆಚ್ಚಾಗುತ್ತಿದ್ದು, ಅದಕ್ಕಾಗಿಯೇ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೈದ್ರಾಬಾದ್ ಟ್ರಾಫಿಕ್ ಅಧಿಕಾರಿಗಳು ಹೇಳಿದ್ದಾರೆ.

2016 ಕ್ಕೆ ಹೋಲಿಸಿದರೆ ಹೈದ್ರಾಬಾದ್ ನಲ್ಲಿ ಅಪ್ರಾಪ್ತರ ವಾಹನ ಚಾಲನೆ 2017ರಲ್ಲಿ ಶೇ. 30 ರಷ್ಟು ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...