alex Certify
ಕನ್ನಡ ದುನಿಯಾ       Mobile App
       

Kannada Duniya

ಟವರ್ ಹತ್ತಿದ ಯುವಕ ಇಟ್ಟ ಇಂತ ಬೇಡಿಕೆ

ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿ 25ರ ಹರೆಯದ ಯುವಕನೊಬ್ಬ 33,000 ವೋಲ್ಟ್ ನ ಟ್ರಾನ್ಸ್ ಮಿಶನ್ ಟವರ್ ಏರಿದ್ದ. ಅವನು ಹತ್ತಿದ್ದು, ಕರೆಂಟ್ ರಿಪೇರಿಗಲ್ಲ, ಬದಲಾಗಿ ತನ್ನ ಊರಿನ ರಸ್ತೆಯ ಗುಂಡಿ ಮುಚ್ಚಲು! ಗೊತ್ತಾಗಲಿಲ್ವಾ? ಆತ ತನ್ನ ಕಾಲೋನಿಯ ಅಭಿವೃದ್ಧಿ ಮಾಡಬೇಕೆಂದು ಸ್ಥಳೀಯಾಡಳಿತಕ್ಕೆ ಒತ್ತಾಯಿಸಲು ಟವರ್ ಏರಿದ್ದ.

ತನ್ನ ಕಾಲೋನಿಯನ್ನು ಕಸದಿಂದ ಮುಕ್ತಗೊಳಿಸಬೇಕು ಹಾಗೂ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು ಎಂದು ಟವರ್ ಮೇಲಿಂದ ಬೇಡಿಕೆ ಸಲ್ಲಿಸಿದ. ಎರಡು ಗಂಟೆಗಳ ಕಾಲ ನಡೆದ ಹೈಡ್ರಾಮಾಕ್ಕೆ ಅಂತ್ಯ ಹಾಡಿದ ಪೊಲೀಸರು ಆತನನ್ನು ಸುರಕ್ಷಿತವಾಗಿ ಕೆಳಕ್ಕಿಳಿಸಿದರು. ಈ ವಿಚಿತ್ರ ಪ್ರತಿಭಟನೆ ನಡೆಸಿದ ಯುವಕನನ್ನು ಅಜ್ಮಲ್ ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಹೊತ್ತಲ್ಲಿ ಈತ ಟವರ್ ಏರುತ್ತಿದ್ದಂತೆ ಸ್ಥಳೀಯ ನಿವಾಸಿಗಳೆಲ್ಲ ಅಲ್ಲಿ ಜಮಾಯಿಸಿದರು. ಯಾರೋ ಪುಣ್ಯಾತ್ಮರು ಪೊಲೀಸರಿಗೆ ವಿಷಯವನ್ನೂ ಮುಟ್ಟಿಸಿದರು. ಆತನ ಮನವೊಲಿಸಿ ಕೆಳಕ್ಕಿಳಿಸಿದ ನಂತರ ಕೌನ್ಸೆಲಿಂಗ್ ನಡೆಸಿದಾಗ ಈ ಯುವಕ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂಬುದು ತಿಳಿದುಬಂದಿದೆ ಎಂದು ಬಳಿಕ ಪೊಲೀಸರು ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಫಿರೋಜಾಬಾದ್ ಜಿಲ್ಲೆಯಲ್ಲಿ ಈ ರೀತಿ ಟವರ್ ಹತ್ತಿದ ಆರು ಪ್ರಕರಣಗಳು ವರದಿಯಾಗಿವೆ. ಈ ರೀತಿ ಹುಚ್ಚು ಪ್ರತಿಭಟನೆ ನಡೆಸಿದ ಒಬ್ಬ ವ್ಯಕ್ತಿ ದುರ್ಮರಣವನ್ನೂ ಅಪ್ಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...