alex Certify
ಕನ್ನಡ ದುನಿಯಾ       Mobile App
       

Kannada Duniya

25 ಮಹಿಳಾ ಪೇದೆಗಳನ್ನು ಕಾಡಿದ ದೆಹಲಿ ಇನ್ಸ್ ಪೆಕ್ಟರ್

25 women police personnel accuse Delhi Inspector of sexual harassmentದೆಹಲಿಯ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಕಳೆದ ಕೆಲವು ತಿಂಗಳುಗಳಿಂದ ಲೈಂಗಿಕ ಕಿರುಕುಳ ಕೊಡುತ್ತಿದ್ದಾರೆ ಅಂತಾ 25ಕ್ಕೂ ಹೆಚ್ಚು ಮಹಿಳಾ ಪೊಲೀಸರು ಆರೋಪ ಮಾಡಿದ್ದಾರೆ.

ಈ ಬಗ್ಗೆ 4 ತಿಂಗಳ ಹಿಂದೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಡಿಸಿಪಿಗೆ ದೂರು ನೀಡಿದ್ದರು. ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರು ಆಕೆಯನ್ನು ಲಾಜಿಸ್ಟಿಕ್ ಇಲಾಖೆಗೆ ವರ್ಗ ಮಾಡಿ ಸುಮ್ಮನಾಗಿದ್ರು.

ಹಾಗಾಗಿ ಮಹಿಳಾ ಪೊಲೀಸರು ಆಯುಕ್ತರ ಮೊರೆ ಹೋಗಿದ್ದಾರೆ. ಕಾನ್ ಸ್ಟೇಬಲ್ ಗಳಿಂದ ಹಿಡಿದು ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಗಳವರೆಗೆ ಸುಮಾರು 25 ಮಹಿಳಾ ಪೊಲೀಸರಿಗೆ ಇನ್ಸ್ ಪೆಕ್ಟರ್ ಕಿರುಕುಳ ನೀಡಿದ್ದಾರಂತೆ.

ಇನ್ಸ್ ಪೆಕ್ಟರ್ ತಮ್ಮ ಜೊತೆ ಮಾತನಾಡುವ ವೇಳೆ ಭೌತಿಕ ಲಕ್ಷಣಗಳುಳ್ಳ ಪದಗಳನ್ನು ಬಳಕೆ ಮಾಡುತ್ತಾರೆ, ಲೈಂಗಿಕ ಸಂಬಂಧ ಬೆಳೆಸುವಂತೆ ಪ್ರಸ್ತಾಪ ಇಡುತ್ತಾರೆ, ವಿರೋಧಿಸಿದಲ್ಲಿ ವೃತ್ತಿ ಬದುಕನ್ನೇ ಹಾಳು ಮಾಡುವುದಾಗಿ ಬೆದರಿಸುತ್ತಾರೆಂದು ಮಹಿಳಾ ಪೊಲೀಸರು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...