alex Certify
ಕನ್ನಡ ದುನಿಯಾ       Mobile App
       

Kannada Duniya

ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ

ಅನಿವಾಸಿ ಭಾರತೀಯರ ಬಹು ದಿನಗಳ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆಯಿದೆ. ಉದ್ಯೋಗ ಸೇರಿದಂತೆ ಹತ್ತಾರು ಅನಿವಾರ್ಯ ಕಾರಣಗಳಿಂದ ಹೊರ ದೇಶಗಳಲ್ಲಿ ನೆಲೆಸಿರುವ ಭಾರತೀಯರ ಮನ, ದೇಶದ ಹಿತಕ್ಕಾಗಿ ಮಿಡಿಯುತ್ತಿತ್ತಾದರೂ ಸಕ್ರಿಯವಾಗಿ ಪಾಲ್ಗೊಳ್ಳಲಾಗುತ್ತಿರಲಿಲ್ಲ.

ಈಗ ಅದಕ್ಕೆ ಅವಕಾಶ ಕೂಡಿ ಬರುವ ಸಾಧ್ಯತೆಯಿದ್ದು, ಅನಿವಾಸಿ ಭಾರತೀಯರ ಬಹು ದಿನಗಳ ಬೇಡಿಕೆಯಾದ ಮತದಾನದ ಹಕ್ಕು ಶೀಘ್ರದಲ್ಲೇ ಪ್ರಾಪ್ತಿಯಾಗುವ ಸಾಧ್ಯತೆಯಿದೆ. ಆ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಅನಿವಾಸಿ ಭಾರತೀಯರೂ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.

ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡುವ ಕುರಿತಂತೆ ಶುಕ್ರವಾರದಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದು, ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡುವ ಕಾಯ್ದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ತಿಳಿಸಿದೆ. ಕೇಂದ್ರ ಚುನಾವಣಾ ಆಯೋಗವೂ ಸಹ ಅನಿವಾಸಿ ಭಾರತೀಯರಿಗೆ ಮತದಾನ ಹಕ್ಕು ನೀಡುವ ಕುರಿತು ಯಾವುದೇ ತಕರಾರಿಲ್ಲವೆಂದು ತಿಳಿಸಿತ್ತು. ಅನಿವಾಸಿ ಭಾರತೀಯರಿಗೆ ಇ-ಬ್ಯಾಲೆಟ್ ಅಥವಾ ಪೋಸ್ಟಲ್ ಮೂಲಕ ಮತದಾನದ ಹಕ್ಕು ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕು ನೀಡಿದ ಪಕ್ಷದಲ್ಲಿ 25 ಮಿಲಿಯನ್ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...