alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಕೈಯ್ಯಲ್ಲಿದ್ದ ಲಡ್ಡು ಕದ್ದವರ್ಯಾರು..?

LADDU STOLENಕಳ್ಳರಿಗೆ ದೇವರ ಭಯವೂ ಇಲ್ಲ. ಯಾಕಂದ್ರೆ ಹೈದ್ರಾಬಾದ್ ನಲ್ಲಿ ವಿಘ್ನ ನಿವಾರಕನ ಕಣ್ಣೆದುರಲ್ಲೇ ಕಳ್ಳತನ ನಡೆದಿದೆ. ಕುಶೈಗುಡಾದ ಗಣೇಶ ಪೆಂಡಾಲ್ ನಲ್ಲಿ ಯಾರೋ 25ಕೆಜಿ ಲಾಡು ಕಳವು ಮಾಡಿದ್ದಾರೆ.

ಎ.ಎಸ್. ರಾವ್ ನಗರದ ಬಳಿ ಶ್ರೀನಿವಾಸ ನಗರ ಕ್ಷೇಮಾಭಿವೃದ್ಧಿ ಸಂಘದವರು ಸಾರ್ವಜನಿಕ ಗಣೇಶೋತ್ಸವ ಆಯೋಜಿಸಿದ್ದರು. ಲಡ್ಡು ಗಣೇಶ ಅಲ್ಲಿಯ ಸ್ಪೆಷಲ್. ಲಾಡುವಿನಿಂದ್ಲೇ ಮಾಡಿದ ಗಣೇಶನನ್ನು ಪೆಂಡಾಲ್ ನಲ್ಲಿ ಕೂರಿಸಲಾಗಿತ್ತು.

ಯಾರೋ ದೇವರ ದರ್ಶನಕ್ಕೆ ಬಂದವರು ಗಣಪತಿ ಮೂರ್ತಿಯ ಕೈಯಲ್ಲಿದ್ದ 25 ಕೆಜಿ ತೂಕದ ಲಾಡುವನ್ನೇ ಎಗರಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಅಂಗಡಿಯೊಂದರ ಮಾಲೀಕ ರಾಕೇಶ್, ಆಯೋಜಕರನ್ನು ಎಚ್ಚರಿಸಿದ್ದ. ಆದ್ರೆ ಕೂಲಂಕುಷ ವಿಚಾರಣೆ ನಡೆಸಿದಾಗ ಬೆಳಗ್ಗೆ ರಾಕೇಶ್ ಅಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅನ್ನೋದು ಗೊತ್ತಾಗಿದೆ. ಬಹುಶಃ ರಾಕೇಶ್ ಗಣಪನ ಕೈಯಲ್ಲಿದ್ದ ಲಾಡು ಕದ್ದಿರಬಹುದು ಅನ್ನೋದು ಎಲ್ಲರ ಗುಮಾನಿ. ಪೊಲೀಸರು ಕೂಡ ರಾಕೇಶ್ ನ ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...