alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವನ್ನು ಕಸಕ್ಕೆಸೆದು ಅಪಹರಣದ ನಾಟಕವಾಡಿದ್ಲು ಮಹಾತಾಯಿ

ದೆಹಲಿಯ ಕಲ್ಯಾಣಪುರದಲ್ಲಿ ಮುಜುಗರದ ಘಟನೆಯೊಂದು ನಡೆದಿದೆ. 25 ದಿನದ ಶಿಶುವನ್ನು ತಾಯಿಯೊಬ್ಬಳು ಕಸಕ್ಕೆ ಎಸೆದಿದ್ದಾಳೆ. ನಂತ್ರ ಮಗು ಕಣ್ಮರೆಯಾಗಿದೆ ಎಂದು ದೂರು ನೀಡಿದ್ದಾಳೆ.

ತಲೆಗೆ ಗಂಭೀರ ಗಾಯವಾಗಿದ್ದರಿಂದ ಮಗು ಸಾವನ್ನಪ್ಪಿದೆ. ಪೊಲೀಸ್ ಠಾಣೆಗೆ ಬಂದು ಹಂಗಾಮ ಮಾಡಿದ್ದ ತಾಯಿ ಬಣ್ಣವನ್ನು ಬಾಲಕನೊಬ್ಬ ಬಯಲು ಮಾಡಿದ್ದಾನೆ. 25 ದಿನಗಳ ಹಿಂದೆ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಘಟನೆ ನಡೆದ ದಿನ ಮನೆಯಿಂದ ಹೊರ ಹೋಗಿದ್ದ ನೇಹಾ ಅಳ್ತಾ ಬಂದಿದ್ದಾಳೆ. ಮಗು ಕಾಣೆಯಾಗಿದೆ ಎಂದಿದ್ದಾಳೆ. ನೇಹಾ ಹೇಳಿಕೆ ಮೇರೆಗೆ ಪತಿ ದೂರು ನೀಡಿದ್ದಾನೆ.

ವಿಚಾರಣೆ ಶುರು ಮಾಡಿದ ಪೊಲೀಸರಿಗೆ ಕಸದಲ್ಲಿ ಮಗು ಸಿಕ್ಕಿದೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರೂ ಮಗು ಬದುಕಲಿಲ್ಲ. ಸುತ್ತಮುತ್ತಲಿನವರ ವಿಚಾರಣೆ ನಡೆಸಿದಾಗ ಬಾಲಕನೊಬ್ಬ ಸತ್ಯ ಹೇಳಿದ್ದಾನೆ. ಕೆಂಪು ಸೀರೆಯುಟ್ಟ ಮಹಿಳೆಯೊಬ್ಬಳು ಕೆಲ ಗಂಟೆ ಹಿಂದೆ ಏನನ್ನೋ ಇಲ್ಲಿ ಎಸೆದಿದ್ದಾಳೆ ಎಂದಿದ್ದಾನೆ.

ಮಗು ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲವಂತೆ. ಪದೇ ಪದೇ ಅಳ್ತಿದ್ದ ಮಗು ಮೇಲೆ ಕೋಪಗೊಂಡ ನೇಹಾ ಈ ರೀತಿ ಮಾಡಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ ನೇಹಾ ತಪ್ಪೊಪ್ಪಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...