alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕಣ್ಣೆದುರೇ ಪತಿ ಮಾಡಿದ್ದಾನೆ ಇಂತ ಕೆಲಸ

hanging_7ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ದುರಂತ ಘಟನೆಯೊಂದು ನಡೆದಿದೆ. ಕುಟುಂಬಸ್ಥರನ್ನು ಧಿಕ್ಕರಿಸಿ ಪ್ರೀತಿಸಿದವಳೊಂದಿಗೆ ವಿವಾಹವಾಗಿದ್ದವನೊಬ್ಬ ಪತ್ನಿಯ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಆಕೆಯ ಕಣ್ಣೆದುರೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಬಿಹಾರದ ಸಮಷ್ಟಿಪುರ ನಿವಾಸಿ ರಿಜ್ವಾನ್ ಎರಡು ತಿಂಗಳ ಹಿಂದೆ ತಾನು ಪ್ರೀತಿಸಿದ ನಸ್ರೀನ್ ಜೊತೆ ಪರಾರಿಯಾಗಿದ್ದು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಮ್ಮಗಳ ವಿವಾಹಕ್ಕೆ ಕುಟುಂಬಸ್ಥರ ವಿರೋಧವಿದ್ದ ಕಾರಣ ಪ್ರಿಯತಮೆ ಜೊತೆ ಪರಾರಿಯಾಗಿದ್ದ ರಿಜ್ವಾನ್, ವಿವಾಹದ ಬಳಿಕ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನೆಲೆಸಿದ್ದ.

ಜೀವನ ನಿರ್ವಹಣೆಗಾಗಿ ಆತ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು, ಇದಕ್ಕೆ ನಸ್ರೀನ್ ಆಕ್ಷೇಪಿಸುತ್ತಿದ್ದಳೆನ್ನಲಾಗಿದೆ. ನೋಯ್ಡಾದ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ರಿಜ್ವಾನ್, ಶುಕ್ರವಾರ ಮಧ್ಯಾಹ್ನ ಮನೆಗೆ ಬಂದ ವೇಳೆ ನವ ದಂಪತಿಗಳ ನಡುವೆ ಮತ್ತೆ ಗಲಾಟೆ ನಡೆದಿದೆ. ಮೊದಲೇ ಹತಾಶೆಗೊಂಡಿದ್ದ ರಿಜ್ವಾನ್, ಪತ್ನಿ ನಸ್ರೀನ್ ಳ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಆಕೆಯ ಕಣ್ಣೆದುರಲ್ಲೇ ಬೆಡ್ ಶೀಟ್ ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇದನ್ನೆಲ್ಲಾ ಅಸಹಾಯಕಳಾಗಿ ನೋಡುತ್ತಿದ್ದ ನಸ್ರೀನ್ ಕಡೆಗೂ ಬಾಯಿಗೆ ತುರುಕಿದ್ದ ಬಟ್ಟೆ ಬಿಡಿಸಿಕೊಂಡು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾಳೆ. ನೆರೆಹೊರೆಯವರು ಸಹಾಯಕ್ಕೆ ಬರುವಷ್ಟರಲ್ಲಿ ರಿಜ್ವಾನ್ ಪ್ರಾಣಪಕ್ಷಿ ಹಾರಿ ಹೋಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...