alex Certify
ಕನ್ನಡ ದುನಿಯಾ       Mobile App
       

Kannada Duniya

500 ರೂ ಮೊಬೈಲ್ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಕೇವಲ 500 ರೂಪಾಯಿಯ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ದೆಹಲಿಯ ಕಲ್ಯಾಣಪುರಿಯಲ್ಲಿ ನಡೆದಿದೆ. ಕಳ್ಳತನದ ಪ್ರಕರಣ ಒಂದರ ಮೇಲೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ 24 ವರ್ಷದ ಖಲೀದ್ ಮೊಹಮ್ಮದ್ ಎಂಬಾತ, ಶಾರುಖ್ ಖಾನ್ ಎಂಬಾತನನ್ನ ಚಾಕುವಿನಿಂದ ಇರಿದು ಕೊಂದಿದ್ದಾನೆ.

ಇತ್ತೀಚೆಗಷ್ಟೆ ಶಾರುಖ್ ಖಾನ್, ಖಲೀಲ್ ಮೊಹಮ್ಮದ್ ನಿಂದ 500 ರುಪಾಯಿಗೆ ಫೋನ್ ಒಂದನ್ನ ಖರೀದಿ ಮಾಡಿದ್ದ. ಆದ್ರೆ ಅದು ಖಲೀಲ್ ಕಳ್ಳತನ ಮಾಡಿ ಶಾರುಖ್ ಖಾನ್ ಗೆ ಮಾರಾಟ ಮಾಡಿದ ಫೋನ್ ಆಗಿತ್ತು. ಈ ವಿಚಾರ ಶಾರುಖ್ ಗೆ ಗೊತ್ತಾದ ಬಳಿಕ ಫೋನ್ ಹಿಂತಿರುಗಿಸಿ ತಾನು ಕೊಟ್ಟ 500 ರೂಪಾಯಿ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಘಟನೆ ನಡೆದ ನಂತರದಲ್ಲಿ ರಾತ್ರಿಯ ವೇಳೆ ತನ್ನ ಸೋದರ ಮತ್ತು ಸ್ನೇಹಿತನೊಂದಿಗೆ ಬಂದ ಖಲೀಲ್ ಮೊಹಮ್ಮದ್, ಶಾರುಖ್ ನನ್ನ ಮನೆಯ ಹತ್ತಿರದಲ್ಲೇ ಇದ್ದ ಬೆಳಕಿಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಎಂಟು ಬಾರಿ ಚಾಕುವಿನಿಂದ ಎದೆ ಮತ್ತು ಹೊಟ್ಟೆ ಭಾಗಕ್ಕೆ ಇರಿದ್ದಾನೆ.

ಘಟನೆ ನಡೆದ ನಂತರ ಸ್ಥಳೀಯರು ಶಾರುಖ್ ಸಹಾಯಕ್ಕೆ ಮುಂದಾಗಲಿಲ್ಲ. ಕೊನೆಗೆ ಆತನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆಗೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದು ಗಂಟೆಯ ಒಳಗೆ ಪ್ರಕರಣದ ಪ್ರಮುಖ ಆರೋಪಿ ಖಲೀಲ್ ಮೊಹಮ್ಮದ್ ಮತ್ತವನ ಸೋದರನನ್ನ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...