alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಯುವಕ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಹಾಕಿ ಲೈಕ್ ಗಿಟ್ಟಿಸಿಕೊಳ್ಳುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡಲು ಹೋಗಿ ದುರಂತ ತಂದುಕೊಂಡ ಹಲವು ಘಟನೆಗಳು ನಡೆದಿವೆ. ಈಗ ಅಂತಹುದೇ ಪ್ರಕರಣವೊಂದರ ವರದಿ ಇಲ್ಲಿದೆ.

ಒಡಿಶಾದ ಕೋರಾಪಟ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸುಬ್ರತೋ ನಾಗ್ ಎಂಬ 24 ವರ್ಷದ ಯುವಕ ಜಲಪಾತದ ತುದಿಯಲ್ಲಿ ಪರ್ಫೆಕ್ಟ್ ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರು ಪಾಲಾಗಿದ್ದಾನೆ. ಜಲಪಾತದ ತುದಿಯಲ್ಲಿ ನಿಂತಿದ್ದ ಆತ, ಕಾಲು ಜಾರಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾನೆ.

ಈತನ ಸಾಹಸವನ್ನು ಹುರಿದುಂಬಿಸುತ್ತಿದ್ದ ಸ್ನೇಹಿತರು ಆತ ಕಾಲು ಜಾರಿ ಪ್ರಪಾತಕ್ಕೆ ಬೀಳುತ್ತಿದ್ದ ವೇಳೆ ನಿಸ್ಸಾಹಾಯಕರಾಗಿ ನೋಡಿದ್ದಾರೆ. ಬಳಿಕ ಪೊದೆಗಳ ನಡುವೆ ಸಿಲುಕಿಕೊಂಡಿದ್ದವನನ್ನು ಹೇಗೋ ಹುಡುಕಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನನ್ನು ಈಗ ಕೋರಾಪಟ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ ಯುವಕನ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...