alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ಯಾಸಿಯಾಗಲು 100 ಕೋಟಿ ಆಸ್ತಿ ತ್ಯಜಿಸಿದ ಯುವಕ

ಸನ್ಯಾಸ ದೀಕ್ಷೆ ಪಡೆಯಲು 24 ವರ್ಷದ ಯುವಕರೊಬ್ಬರು ಕುಟುಂಬದ 100 ಕೋಟಿ ಮೌಲ್ಯದ ಆಸ್ತಿಯನ್ನು ತ್ಯಜಿಸಿದ್ದಾರೆ. ಎರಡು ವರ್ಷದ ಹಿಂದೆ ಸಿಎ ವ್ಯಾಸಂಗ ಪೂರೈಸಿದ ಬಳಿಕ ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಿದ್ದ ಮೋಕ್ಷೇಶ್ ಸೇಥ್ ಈಗ ಸನ್ಯಾಸಿಯಾಗಿದ್ದಾರೆ.

ಗುಜರಾತ್ ನ ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಮೋಕ್ಷೇಶ್ ಸೇಥ್ ಸನ್ಯಾಸ ದೀಕ್ಷೆ ಪಡೆದಿದ್ದು, ಇನ್ನು ಮುಂದೆ ಅವರನ್ನು ಕರುಣಾಪ್ರೇಮ್ ವಿಜಯ್ ಜಿ ಎಂದು ಕರೆಯಲಾಗುತ್ತದೆ. ಸನ್ಯಾಸ ದೀಕ್ಷೆ ಸಮಾರಂಭದಲ್ಲಿ ಕುಟುಂಬ ಸದಸ್ಯರೂ ಹಾಜರಿದ್ದರು.

ಮೋಕ್ಷೇಶ್ ಸೇಥ್ ರ ಕುಟುಂಬ ಮೂಲತಃ ಗುಜರಾತ್ ನ ಬಾನಸ್ಕಾಂತಾ ಜಿಲ್ಲೆಯ ದಿಸಾ ಪಟ್ಟಣದವರಾಗಿದ್ದು, ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದ ಕುಟುಂಬ ಅಲ್ಲಿ ಉದ್ಯಮದಲ್ಲಿ ತೊಡಗಿಕೊಂಡಿತ್ತು. ಇದೀಗ ಕುಟುಂಬ ಸದಸ್ಯರ ಸಮ್ಮತಿಯೊಂದಿಗೆ ಮೋಕ್ಷೇಶ್ ಸೇಥ್ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಮೂರು ದಿನಗಳ ಹಿಂದೆಯೂ ಸೂರತ್ ನ ವಜ್ರ ವ್ಯಾಪಾರಿಯೊಬ್ಬರ 12 ವರ್ಷದ ಮಗ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...