alex Certify
ಕನ್ನಡ ದುನಿಯಾ       Mobile App
       

Kannada Duniya

23 ವರ್ಷಗಳ ಬಳಿಕವೂ ತಂದೆ-ಮಗನನ್ನು ಒಂದು ಮಾಡದ ವಿಧಿ

Vector illustration of a man lock up in prison

ಅದು 1996ರ ಸಮಯ, ತಂದೆಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಖಚಿತಪಡಿಸಿದಾಗ ಸಾಜಿದ್ ಮಕ್ವಾನಾಗೆ ಆಗಿನ್ನೂ 4 ವರ್ಷ ವಯಸ್ಸು. ಜೈಲು ಸೇರಿದ ಮೇಲೆ ಹಸನ್ ಒಮ್ಮೆಯೂ ಪೆರೋಲ್ ಗಾಗಿ ಮನವಿ ಮಾಡಿರಲಿಲ್ಲ. ಆಗಾಗ ದೂರವಾಣಿಯಲ್ಲಿ ಕುಟುಂಬದವರೊಡನೆ ಮಾತನಾಡುತ್ತಿದ್ದ.

ಕೊನೆಗೂ 23 ವರ್ಷಗಳ ಜೈಲುವಾಸದ ಬಳಿಕ ಹಸನ್ ಗೆ ಬಿಡುಗಡೆಯ ಭಾಗ್ಯ ದೊರೆತಿತ್ತು. ಮಂಗಳವಾರ ಹಸನ್ ಕಲಂಬಾ ಕೇಂದ್ರ ಕಾರಾಗೃಹದಿಂದ ಹೊರಬಂದಿದ್ದ. ಹಸನ್ ಗೆ 23 ವರ್ಷಗಳ ನಂತರ ಮರಳಿ ಕುಟುಂಬದವರನ್ನು ಸೇರುತ್ತಿರುವ ಖುಷಿಯಾದ್ರೆ, ಮಗ ಸಾಜಿದ್ ಗೆ ತಂದೆಯ ವಾತ್ಸಲ್ಯವನ್ನು ಮರಳಿ ಪಡೆದ ಸಂತಸ.

ಆದ್ರೆ ತಂದೆ-ಮಗನ ಈ ಸಮ್ಮಿಲನದಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ. ಅಪ್ಪನನ್ನು ನೋಡಿದ ಖುಷಿಯಲ್ಲಿ ಸಾಜಿದ್ ಗೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದ್ದು, ಜೈಲಿನ ಆವರಣದಲ್ಲೇ ಮೃತಪಟ್ಟಿದ್ದಾನೆ. 65 ವರ್ಷದ ಹಸನ್ ಮಧ್ಯಾಹ್ನ ಜೈಲಿನಿಂದ ಹೊರಬಂದಿದ್ದ, ಜೈಲು ಅಧಿಕಾರಿಗಳಿಗೆಲ್ಲ ನಮಸ್ಕರಿಸಿ ಹೊರಗೆ ಕಾರಿನ ಬಳಿ ನಿಂತಿದ್ದ ಕುಟುಂಬದವರತ್ತ ನಡೆದಿದ್ದ. ಅಪ್ಪನನ್ನು ತಬ್ಬಿಕೊಳ್ಳಬೇಕು ಎನ್ನುವಷ್ಟರಲ್ಲಿ ಮಗ ಸಾಜಿದ್ ಎದೆನೋವಿನಿಂದ ಕುಸಿದು ಬಿದ್ದಿದ್ದಾನೆ.

ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಸಾಜಿದ್ ಮೃತಪಟ್ಟಿದ್ದಾನೆ. 1977ರಲ್ಲಿ ಹಸನ್ ಹಾಗೂ ಮತ್ತೋರ್ವ ವ್ಯಕ್ತಿ ಮಧ್ಯೆ ಮಾರಾಮಾರಿ ನಡೆದಿತ್ತು, ಈ ಬಡಿದಾಟದಲ್ಲಿ ಆತ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಹಸನ್ ಗೆ 1996ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈಗ ಜೈಲುವಾಸದಿಂದ ಮುಕ್ತಿ ಪಡೆದಿರುವ ಹಸನ್ ಗೆ ವಿಧಿ ಅದಕ್ಕಿಂತಲೂ ದೊಡ್ಡ ಶಿಕ್ಷೆ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...