alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಗೆ ಕೆಲವೇ ಘಂಟೆಗಳ ಮುನ್ನ ಅಪ್ಪನಿಂದ್ಲೇ ಕೊಲೆಯಾದ್ಲು ವಧು

ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ 22 ವರ್ಷದ ಯುವತಿಯನ್ನು ಅವಳ ತಂದೆಯೇ ಹತ್ಯೆ ಮಾಡಿದ್ದಾನೆ. ಅರೀಕೋಡೆ ಎಂಬಲ್ಲಿ ಈ ಕೃತ್ಯ ನಡೆದಿದ್ದು, ಮದುವೆಗೆ ಕೆಲವೇ ಗಂಟೆಗಳ ಮೊದಲು ವಧು ಕೊಲೆಯಾಗಿದ್ದಾಳೆ.

ಅಥಿರಾ ಮಂಜೇರಿ ಮೆಡಿಕಲ್ ಕಾಲೇಜಿನ ಡಯಾಲಿಸಿಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ಲು. ಥಿಯ್ಯಾ ಸಮುದಾಯಕ್ಕೆ ಸೇರಿದವಳು. ಹಿಂದುಳಿದ ವರ್ಗಕ್ಕೆ ಸೇರಿದ ಯುವಕನನ್ನು ಪ್ರೀತಿಸಿದ್ದಳು.

ಆತ ಸೇನೆಯಲ್ಲಿ ಕರ್ತವ್ಯ ನಿರ್ವಹಿಸ್ತಾ ಇದ್ದ. ತಂದೆ ರಂಜನ್ ಗೆ ಮಗಳನ್ನು ಹಿಂದುಳಿದ ವರ್ಗದ ಯುವಕನಿಗೆ ಕೊಟ್ಟು ಮದುವೆ ಮಾಡುವುದು ಇಷ್ಟವಿರಲಿಲ್ಲ. ಆದ್ರೂ ಒಲ್ಲದ ಮನಸ್ಸಿನಿಂದ್ಲೇ ಮದುವೆಗೆ ಸಮ್ಮತಿ ನೀಡಿದ್ದ. ಇಂದು ಮದುವೆ ನೆರವೇರಬೇಕಿತ್ತು.

ನಿನ್ನೆ ಅಥಿರಾ ಮತ್ತವಳ ತಂದೆ ಮಧ್ಯೆ ಜಗಳವಾಗಿದೆ. ಕೋಪದ ಭರದಲ್ಲಿ ರಂಜನ್ ಮಗಳಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಅಥಿರಾಳನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಯ್ತು, ಆದ್ರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...