alex Certify
ಕನ್ನಡ ದುನಿಯಾ       Mobile App
       

Kannada Duniya

UNO ಗೇಮ್ ಸೋತಿದ್ದಕ್ಕೆ ಚಾಕುವಿನಿಂದ ಇರಿದ ಯುವಕ

ಗೇಮ್ ನಲ್ಲಿ ಸೋತಿದ್ದಕ್ಕಾಗಿ ಕೋಪಗೊಂಡು ಯುವಕನೊಬ್ಬ ತನ್ನ ನೆರೆಮನೆಯವನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮುಂಬೈನ ಅಬುಜ್ ಅನ್ಸಾರಿ ಕೊಲೆಯಾದ ಯುವಕ. ಸಂಜೆ 6.15ರ ವೇಳೆಗೆ ಈ ಕೃತ್ಯ ನಡೆದಿದೆ.

ಪ್ರತಿದಿನ ಸಂಜೆ ಕೆಲಸ ಮುಗಿಸಿ ಬಂದ ಬಳಿಕ ಅನ್ಸಾರಿ ತನ್ನ ತಾಯಿ ಹಾಗೂ ಅಕ್ಕಪಕ್ಕದ ಮನೆಯ ಮಕ್ಕಳ ಜೊತೆಗೆ UNO ಕಾರ್ಡ್ಸ್ ಆಡುತ್ತಿದ್ದ. ಶನಿವಾರ ನೆರೆಮನೆಯ ನೂರ್ ಮೊಹಮ್ಮದ್ ಎಂಬಾತ UNO ಗೇಮ್ ಆಡಲು ಅನ್ಸಾರಿಯನ್ನು ಆಹ್ವಾನಿಸಿದ್ದ.

ಅನ್ಸಾರಿ ಮನೆ ಮುಂದೆಯೇ ಕುಳಿತು ಇಬ್ಬರೂ ಗೇಮ್ ಆಡಿದ್ದಾರೆ. ಮೊಹಮ್ಮದ್ ಒಂದಾದ ಮೇಲೊಂದು ಪಂದ್ಯಗಳನ್ನು ಸೋಲುತ್ತಿದ್ದ. ಆಟದಲ್ಲಿ ಮೋಸ ಮಾಡ್ತಿದ್ದೀಯಾ ಅಂತಾ ಅನ್ಸಾರಿ ಮೇಲೆ ಆರೋಪ ಮಾಡಿದ್ದ. ಆದ್ರೆ ಅನ್ಸಾರಿ ತಲೆಕೆಡಿಸಿಕೊಳ್ಳದೇ ಜೋರಾಗಿ ನಕ್ಕಿದ್ದ.

ಇದರಿಂದ ಕೆರಳಿದ ಮೊಹಮ್ಮದ್ ಜೇಬಿನಲ್ಲಿದ್ದ ಚಾಕು ತೆಗೆದು ಅನ್ಸಾರಿಯ ತಲೆ, ಎದೆ, ಭುಜ, ಬೆನ್ನಿಗೆಲ್ಲಾ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಅನ್ಸಾರಿಯ ತಾಯಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಮಾರ್ಗಮಧ್ಯೆಯೇ ಅವನು ಮೃತಪಟ್ಟಿದ್ದಾನೆ. ಹಂತಕನನ್ನು ಕೆಲವೇ ಘಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...