alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನ ಪ್ರವಾಸಕ್ಕೆ ಆಗಮಿಸಿದ್ದ ಫ್ರೆಂಚ್ ಯುವತಿ ನಾಪತ್ತೆ

ಜೈಪುರ: ಪ್ರವಾಸಕ್ಕಾಗಿ ಪುಷ್ಕರಕ್ಕೆ ಆಗಮಿಸಿದ್ದ ಫ್ರಾನ್ಸ್ ನ ಗಯೇಲ್ ಚೌಟಿಯ ಎಂಬ 21 ವರ್ಷದ ಯುವತಿ ಕಳೆದ 2 ವಾರದಿಂದ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಅಜ್ಮೀರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿ ಹುಡುಕಾಟಕ್ಕೆ ಕ್ರಮ ಕೈಗೊಂಡಿದ್ದಾರೆ.

ಪುಷ್ಕರದಲ್ಲಿನ ಹೋಟೆಲ್‌ ನಲ್ಲಿ ತಂಗಿದ್ದ ಆಕೆ, ಬೇರೊಂದು ಸ್ಥಳವನ್ನು ಹುಡುಕಿ ಹೊರಟಿರುವುದಾಗಿ ಹೋಟೆಲ್‌ ಸಿಬ್ಬಂದಿಗೆ ತಿಳಿಸಿದ್ದು, 2 ವಾರದ ಬಳಿಕ ವಾಪಾಸ್ಸಾಗುವುದಾಗಿ ಹೇಳಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.

ಪುಷ್ಕರದ ಜೋಲಿ ಚೌಕ್‌ ಹೋಟೆಲ್‌ ನಲ್ಲಿ ಮೇ 30 ರಂದು ಆಗಮಿಸಿದ್ದ ಚೌಟಿಯಾ, ಜೂನ್ 1 ಕ್ಕೆ ಹೋಟೇಲ್‌ ನಿಂದ ನಿರ್ಗಮಿಸಿದ್ದಾಳೆ. ಪೊಲೀಸರು ಆಕೆಯ ಮೊಬೈಲ್‌ ಫೋನ್‌ ಇರುವಿಕೆಯ ಬಗ್ಗೆ ಪತ್ತೆ ಹಚ್ಚುತ್ತಿದ್ದು, ಈವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ. ಜೈಪುರದಿಂದ ಅಲ್ವರದ ತಪುಕ್ರ ಎಂಬ ಜಾಗವನ್ನು ಹುಡುಕಿಕೊಂಡು ತೆರಳುವುದಾಗಿ ಚೌಟಿಯಾ ಹೇಳಿದ್ದಾಗಿ ಹೋಟೆಲ್‌ ಸಿಬ್ಬಂದಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಮೇ 31 ರ ಬಳಿಕ ಚೌಟಿಯ ಜತೆ ಸಂಪರ್ಕ ಕಳೆದುಕೊಂಡಿರುವುದಾಗಿ ಆಕೆಯ ಸ್ನೇಹಿತರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಂತೆಯೇ ಜೂನ್ 1  ರ ಬಳಿಕ ಆಕೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಸಾಮಾಜಿಕ ತಾಣಗಳ ಮೂಲಕವೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ. ಫ್ರಾನ್ಸ್‌ನ ಭಾರತ ರಾಯಭಾರಿ ಕಚೇರಿ, ಈ ಸಂಬಂಧ ಟ್ವಿಟರ್‌ ಮೂಲಕ ಸಹಾಯ ಮಾಡುವಂತೆ ಸಾರ್ವಜನಿಕರನ್ನು ಕೋರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...