alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಲ್ಡನ್ ಬಾಬಾ ಕನ್ವಾರ್ ಯಾತ್ರೆಯಲ್ಲಿ 21 ಐಷಾರಾಮಿ ಕಾರುಗಳು

ನೋಡೋಕೆ ಖಾವಿಧಾರಿ. ಆದ್ರೆ ಮೈಮೇಲೆ ಕೆಜಿಗಟ್ಟಲೆ ಚಿನ್ನ, ಕತ್ತಿನಲ್ಲಿ ಸುಮಾರು 25 ಚಿನ್ನದ ಸರಗಳು. ಒಂದೊಂದು ಕೂಡ 500 ಗ್ರಾಂಗಿಂತ ಕಡಿಮೆ ಇಲ್ಲ. ಹೀಗೆ ಹೇಳಿದರೆ ಸಾಕು ಅದು ಗೋಲ್ಡನ್ ಬಾಬಾ ಅಂತ ಯಾರು ಬೇಕಾದ್ರು ಸುಲಭವಾಗಿ ಗೆಸ್ ಮಾಡಿಬಿಡ್ತಾರೆ. ಹೌದು, ಗೋಲ್ಡನ್ ಬಾಬಾರ 200 ಕಿಲೋಮೀಟರ್ ಕನ್ವಾರ್ ಯಾತ್ರೆ ಗಾಜಿಯಾಬಾದ್ ನಲ್ಲಿ ಅಂತ್ಯಗೊಂಡಿದೆ.

ಗಾಜಿಯಾಬಾದ್ ನಲ್ಲಿ ಸುಧೀರ್ ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾರ ಕನ್ವಾರ್ ಯಾತ್ರೆ ಮುಗಿದಿದೆ. ಯಾತ್ರೆಯ ಅಂತ್ಯದಲ್ಲಿ, ವಯಸ್ಸು ನನಗೆ ಸಹಕರಿಸಿದರೆ ಮತ್ತೊಂದು ಕನ್ವಾರ್ ಯಾತ್ರೆಯನ್ನು ಮಾಡೋದಾಗಿ 58 ವರ್ಷದ ಗೋಲ್ಡನ್ ಬಾಬಾ ತಿಳಿಸಿದ್ದಾರೆ. ಕಳೆದ ವರ್ಷ ನಡೆದಿದ್ದ ಕನ್ವಾರ್ ಯಾತ್ರೆಯಲ್ಲಿ 14.5 ಕೆಜಿ ಚಿನ್ನ ಧರಿಸಿದ್ರೆ ಈ ಬಾರಿಯ ಯಾತ್ರೆಯಲ್ಲಿ 20 ಕೆಜಿ ಚಿನ್ನವನ್ನು ಬಾಬಾ ಧರಿಸಿದ್ದರು. ಕಳೆದ ವರ್ಷದ ಯಾತ್ರೆಯಲ್ಲಿ ಇದು ತನ್ನ ಅಂತಿಮ ಕನ್ವಾರ್ ಯಾತ್ರೆಯಾಗಲಿದೆ ಅಂತ ಹೇಳಿದ್ದರು.

ಹೊಟ್ಟೆ ನೋವು ಮತ್ತು ನಿರ್ಜಲೀಕರಣದ ಸಮಸ್ಯೆಯಿಂದಾಗಿ ಬಾಬಾ ಬಳಲುತ್ತಿದ್ದು ಯಾತ್ರೆಯ ಸಮಯದಲ್ಲಿ ಕೆಲ ಪ್ರತಿಷ್ಟಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಹಾಗಿದ್ದರು ಅವರಿಗೆ ಆರೋಗ್ಯ ಸಮಸ್ಯೆ ಬಗೆಹರಿದಿಲ್ಲ. ಈ ಬಾರಿಯ ಯಾತ್ರೆ ಗೋಲ್ಡನ್ ಬಾಬಾರ 25ನೇ ವರ್ಷದ ಕನ್ವಾರ್ ಯಾತ್ರೆಯಾಗಿದೆ. ಈ ಬಾರಿಯ ಯಾತ್ರೆಗೆ 1 ಕೋಟಿ 25 ಲಕ್ಷ ರೂಪಾಯಿ ವೆಚ್ಚವಾಗಿದೆ. ಲಕ್ಷುರಿ ಕಾರುಗಳು, ಅಂಬುಲೆನ್ಸ್, ವಾಟರ್ ಪ್ರೂಫ್ ಟೆಂಟ್ಸ್, ವೈದ್ಯರಿಗಾಗಿ ಸಾಕಷ್ಟು ಹಣ ವ್ಯಯವಾಗಿದೆ.

25 ವರ್ಷದ ಯಾತ್ರೆಗಳ ಪೈಕಿ 250 ರೂಪಾಯಿಗಳಲ್ಲಿ ಮುಗಿದಿದ್ದ ತನ್ನ ಮೊದಲ ಕನ್ವಾರ್ ಯಾತ್ರೆಯೇ ನನ್ನ ನೆನಪಿನಲ್ಲಿ ಉಳಿದಿದೆ ಅಂತಾರೆ ಗೋಲ್ಡನ್ ಬಾಬಾ. ಟೆಂಟ್ ಗಳಲ್ಲಿ ಮಲಗುತ್ತಾ, ಭಕ್ತರಿಂದ ಪ್ರಸಾದವನ್ನು ಪಡೆಯುತ್ತಿದ್ದ ಆ ಕಾಲ ಈಗಿಲ್ಲ ಅನ್ನೋದು ಗೋಲ್ಡನ್ ಬಾಬಾ ಅನಿಸಿಕೆ. ಬಾಬಾ ಬಳಿ ಸದ್ಯ 27 ಕೆಜಿಯಷ್ಟು ಚಿನ್ನ ಸಂಗ್ರಹವಾಗಿದೆ. ಹಾಗಿದ್ದರು ತನಗೆ ಚಿನ್ನದ ಮೇಲಿನ ಮೋಹ ಕಡಿಮೆಯಾಗಿಲ್ಲ ಅಂತಾರೆ ಬಾಬಾ.

ಚಿನ್ನದ ಹೊರತಾಗಿ ಒಂದು ಬಿಎಂಡಬ್ಲ್ಯು ಕಾರು, ಮೂರು ಫಾರ್ಚೂನರ್ ಕಾರು, ಎರಡು ಆಡಿ ಮತ್ತು ಇನೋವಾ ಕಾರುಗಳಿಗೂ ಗೋಲ್ಡನ್ ಬಾಬಾ ಒಡೆಯರಾಗಿದ್ದಾರೆ. ಯಾತ್ರೆಯ ಸಮಯದಲ್ಲಿ ಅವರು ಹಮ್ಮರ್, ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ಗಳಲ್ಲಿ ಪ್ರಯಾಣ ಮಾಡಿದ್ದಾರೆ. ತನ್ನ ಅಂತ್ಯಕಾಲದಲ್ಲಿ ಈ ಸಂಪತ್ತನ್ನೆಲ್ಲಾ ಸೂಕ್ತ ವ್ಯಕ್ತಿಗೆ ದಾನ ಮಾಡೋದಾಗಿ ಗೋಲ್ಡನ್ ಬಾಬಾ ತಿಳಿಸಿದ್ದಾರೆ. ಧಾರ್ಮಿಕ ಪ್ರಪಂಚಕ್ಕೆ ಬರುವ ಮುನ್ನ ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನ ಗೋಲ್ಡನ್ ಬಾಬಾ ನಡೆಸುತ್ತಿದ್ದದ್ದನ್ನು ಇಂದಿಗೂ ಅವರು ಸ್ಮರಿಸುತ್ತಾರೆ. ಸುಮಾರು 150 ಕೋಟಿ ರೂಪಾಯಿ ಆಸ್ತಿಗೆ ಅವರು ಮಾಲೀಕರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...