alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಸಮೋಸಾ ತೂಕ

samosa nm 14

ಗೋರಖ್ ಪುರ: ಸಮೋಸಾ ಜನಪ್ರಿಯ ತಿನಿಸುಗಳಲ್ಲಿ ಒಂದಾಗಿದೆ. ಇಂತಹ ಜನಪ್ರಿಯ ತಿನಿಸು ಈಗ ಗಿನ್ನೆಸ್ ದಾಖಲೆಗೆ ಪಾತ್ರವಾಗಲು ರೆಡಿಯಾಗಿದೆ. ಮಹಾರಾಜ ಗಂಜ್ ಜಿಲ್ಲೆಯ ಗೋಪಾಲನಗರದ 10 ಮಂದಿ ಉತ್ಸಾಹಿ ಯುವಕರು ಬೃಹತ್ ಸಮೋಸಾ ತಯಾರಿಸಿದ್ದಾರೆ.

ಏನಾದರೂ ಮಾಡಬೇಕೆಂಬ ಉತ್ಸಾಹದೊಂದಿಗೆ ಸಮೋಸಾ ತಯಾರಿಸಲು ಮುಂದಾದ ಯುವಕರು, ಬರೋಬ್ಬರಿ 332 ಕೆ.ಜಿ. ತೂಕದ ಸಮೋಸಾ ತಯಾರಿಸಿದ್ದಾರೆ. ರಸ್ತೆ ಬದಿ ಹೋಟೆಲ್ ಒಂದನ್ನು ನಡೆಸುವ 20 ವರ್ಷದ ರಿತೇಶ್ ಸೋನಿ ಇದರ ರೂವಾರಿಯಾಗಿದ್ದು, ಅವರು ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿ 332 ಕೆ.ಜಿ. ತೂಕದ ಸಮೋಸಾ ತಯಾರಿಸಿದ್ದಾರೆ. 90 ಲೀಟರ್ ಎಣ್ಣೆ, 1.75 ಕ್ವಿಂಟಾಲ್ ಗೋಧಿ ಹಿಟ್ಟು, 2 ಕ್ವಿಂಟಾಲ್ ಆಲೂಗಡ್ಡೆ ಬಳಸಿದ್ದು, ಇದಕ್ಕಾಗಿ 40 ಸಾವಿರ ರೂ. ವೆಚ್ಛ ಮಾಡಲಾಗಿದೆ.

332 ಕೆ.ಜಿ.ತೂಕ ಇರುವ ಈ ಬೃಹತ್ ಗಾತ್ರದ ಸಮೋಸಾ 36 ಇಂಚು ಸುತ್ತಳತೆ ಹೊಂದಿದ್ದು, 3 ಮೀಟರ್ ಎತ್ತರ ಇದೆ. ಈದ್ ಸಂದರ್ಭದಲ್ಲಿಯೇ ಈ ಬೃಹತ್ ಗಾತ್ರದ ಸಮೋಸಾ ತಯಾರಿಗೆ ಮುಂದಾಗಿದ್ದರೂ, ಜಿಲ್ಲಾಡಳಿತ ಅನುಮತಿ ನೀಡದ ಕಾರಣ, ಈಗ ಸಿದ್ಧಪಡಿಸಲಾಗಿದೆ ಎಂದು ರಿತೇಶ್ ಸೋನಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...