alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಪ್ರಾಣ ತೆಗೆದಿದೆ 1500 ರೂ. ಸಾಲ

murder_04

ದೆಹಲಿಯಲ್ಲಿ ಕೇವಲ 1,500 ರೂಪಾಯಿಗೆ ಯುವಕನ ಹತ್ಯೆ ನಡೆದು ಹೋಗಿದೆ. ಲಾರಿ ಚಾಲಕ ಮತ್ತವನ ಇಬ್ಬರು ಸಹಚರರು 20 ವರ್ಷದ ಯುವಕನನ್ನು ಹೊಡೆದು ಕೊಂದಿದ್ದಾರೆ. ಕೊಲೆಯಾದ ರಾಹುಲ್, ಸಾಮಾನುಗಳನ್ನು ಲೋಡ್ ಮಾಡೋ ಕೆಲಸ ಮಾಡ್ತಾ ಇದ್ದ. ಅವನ ತಾಯಿ ಆಜಾದ್ಪುರ ಮಾರ್ಕೆಟ್ ನಲ್ಲಿ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾಳೆ.

ರಾಹುಲ್, ರವಿ ಎಂಬಾತನಿಂದ 1500 ರೂಪಾಯಿ ಸಾಲ ಪಡೆದಿದ್ದ. ಸಂಜೆ ಅವನ ಬಳಿ ಬಂದ ರವಿ ಹಣ ವಾಪಸ್ ಕೊಡುವಂತೆ ಕೇಳಿದ್ದಾನೆ. ತನ್ನ ಬಳಿ ಸದ್ಯಕ್ಕೆ ಹಣವಿಲ್ಲ, ಮುಂದಿನ ತಿಂಗಳು ಕೊಡ್ತೀನಿ ಅಂತಾ ಹೇಳಿದ್ದಾನೆ. ಕೂಡಲೇ ರವಿ ತನ್ನ ಸ್ನೇಹಿತರಾದ ಲಲಿತ್ ಮತ್ತು ರಾಜೇಂದರ್ ನನ್ನು ಕರೆಸಿದ್ದ.

ಮೂವರೂ ರಾಹುಲ್ ಮೇಲೆ ಹಲ್ಲೆ ಮಾಡಿದ್ದಾರೆ. ಜನರು ಸುತ್ತ ನಿಂತು ನೋಡ್ತಾ ಇದ್ರೇ ಹೊರತೂ ತಪ್ಪಿಸಲು ಮುಂದಾಗಲಿಲ್ಲ. ಅವರಿಂದ ಬಚಾವ್ ಆಗಲು ರಾಹುಲ್ ರೈಲ್ವೆ ಸ್ಟೇಶನ್ ಕಡೆಗೆ ಓಡಿದ್ದ. ಆದ್ರೆ ಅವನ ಬೆನ್ನಟ್ಟಿ ಬಂದ ಮೂವರೂ ಭೀಕರವಾಗಿ ಥಳಿಸಿ ಕೊಂದು ಹಾಕಿದ್ದಾರೆ. ಪೊಲೀಸರು ಪ್ರಮುಖ ಆರೋಪಿ ರವಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...