alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕೊಲೇಟ್ ಗಣಪನ ನೋಡಿದಿರಾ…?

ಕೆಲ ವರ್ಷಗಳ ಹಿಂದೆ ಗಣೇಶ ಹಬ್ಬ ಅಂದ್ರೆ ಆಳೆತ್ತರದ ಗಣೇಶ ಪ್ರತಿಮೆಗಳನ್ನ ಪ್ರತಿಷ್ಟಾಪಿಸಿ ಆನಂತರ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನೆ ಮಾಡುವ ಪರಿಪಾಠ ಅಷ್ಟೇ ಆಗಿತ್ತು. ಆದ್ರೆ ಈಗ ಗಣೇಶ ಚತುರ್ಥಿ ಸಂಭ್ರಮಾಚರಣೆಯ ಉದ್ದೇಶಗಳು ಬದಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪತಿಯ ಜಾಗದಲ್ಲಿ ಇಕೋ ಫ್ರೆಂಡ್ಲಿ ಮಣ್ಣಿನ ಗಣಪನ ಮೂರ್ತಿಗಳನ್ನ ಜನರು ಆರಾಧಿಸುತ್ತಿದ್ದಾರೆ.

ಆದ್ರೆ ಲೂಧಿಯಾನದ ಹರ್ ಜಿಂದರ್ ಸಿಂಗ್ ಕುಕ್ರೇಜಾ 20 ಮಂದಿ ಶೆಫ್ ಜೊತೆಗೂಡಿ ವಿಭಿನ್ನವಾದ ಗಣಪತಿ ಮೂರ್ತಿಯನ್ನ ನಿರ್ಮಿಸಿದ್ದಾರೆ. 65 ಕೆಜಿ ತೂಕದ ಚಾಕೊಲೇಟ್ ಗಣೇಶನನ್ನ ಅವರು ತಯಾರು ಮಾಡಿದ್ದಾರೆ. 10 ದಿನಗಳ ಕಾಲ ಚಾಕೊಲೇಟ್ ಗಣಪನಿಗೆ ಅಂತಿಮ ರೂಪ ನೀಡೋದಕ್ಕೆ ಅವರು ಸಮಯ ತೆಗೆದುಕೊಂಡಿದ್ದಾರೆ.

ಈ ಚಾಕೊಲೇಟ್ ಗಣಪನ ತಯಾರಿಯ ಹಿಂದೆ ಒಂದು ಸಾಮಾಜಿಕ ಕಳಕಳಿಯೂ ಇದೆ. ಈ ಚಾಕೊಲೇಟ್ ಗಣಪತಿಯ ವಿಸರ್ಜನೆಯ ಕಾರ್ಯ ನೀರಿನಲ್ಲಿ ನಡೆಯೋದಿಲ್ಲ. ಬದಲಾಗಿ ಹಾಲಿನಲ್ಲಿ ನಡೆಯುತ್ತಂತೆ. ವಿಸರ್ಜನೆಗೊಂಡ ಗಣೇಶನ ಚಾಕೊಲೇಟ್ ಮಿಶ್ರಿತ ಹಾಲನ್ನು ಆನಂತರದಲ್ಲಿ ಬಡ ಮಕ್ಕಳಿಗೆ ವಿತರಿಸಲಾಗುತ್ತಂತೆ. ಸತತ ಮೂರನೇ ವರ್ಷ ಹೀಗೊಂದು ಸಾಮಾಜಿಕ ಕಳಕಳಿಯೊಂದಿಗೆ ಚಾಕೋಲೇಟ್ ಗಣೇಶನ ತಯಾರಿಕೆ ಕಾರ್ಯವನ್ನು ಹರ್ ಜಿಂದರ್ ಸಿಂಗ್ ಮುಂದುವರೆಸಿಕೊಂಡು ಬರ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ಪೋಸ್ಟ್ ಆಗಿರುವ ಈ ಚಾಕೊಲೇಟ್ ಗಣಪನ ಫೋಟೋಗೆ ಈಗ ಸಾವಿರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ಮಂದಿ ತಾವು ತಯಾರಿಸಿದ ಚಾಕೊಲೇಟ್ ಗಣಪನ ಫೋಟೋವನ್ನು ಈ ಪೋಸ್ಟ್ ಗೆ ದಾಖಲು ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...