alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ…! ಎರಡು ವರ್ಷದ ಪೋರಿಯಿಂದ ವಿಶ್ವ ದಾಖಲೆ

ಹರಿಯಾಣದ ಪಂಚಕುಲಾದಲ್ಲಿ ನೆಲೆಸಿರುವ ಎರಡು ವರ್ಷ ಎರಡು ತಿಂಗಳಿನ ಪೋರಿಯೊಬ್ಬಳು ವಿಶ್ವದಾಖಲೆಯನ್ನ ನಿರ್ಮಿಸಿದ್ದಾಳೆ. ಭಾರತದ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರು ಒಂದು ನಿಮಿಷದ ಒಳಗೆ ಹೇಳುವ ಮೂಲಕ ಅಮಾರ್ಯಾ ಗುಲಾಟಿ ವಿಶ್ವ ದಾಖಲೆ ನಿರ್ಮಿಸಿದ್ದಾಳೆ.

ಈ ಮೂಲಕ ಕಡಿಮೆ ಸಮಯದಲ್ಲಿ ಕಂಠಪಾಠ ಒಪ್ಪಿಸಿದ ಭಾರತದ ಪೋರಿ ಅನ್ನೋ ದಾಖಲೆಗೆ ಅಮಾರ್ಯಾ ಪಾತ್ರಳಾಗಿದ್ದಾಳೆ. ಅಮಾರ್ಯಾ ಗುಲಾಟಿಗೆ ತಾಯಿಯೇ ಮೊದಲ ಗುರು. ಅಮಾರ್ಯಾ ಏಳು ತಿಂಗಳ ಮಗುವಾಗಿರುವಾಗಿನಿಂದಲೇ ತಾಯಿ ಭಾರತದ ರಾಜ್ಯಗಳು ಮತ್ತು ರಾಜಧಾನಿಗಳನ್ನು ಹೇಳುವ ಪರಿಪಾಠ ಶುರು ಮಾಡಿದರಂತೆ.

ಆನಂತರದಲ್ಲಿ ಈ ಹವ್ಯಾಸವೇ ಆಕೆಗೆ ಅಭ್ಯಾಸವಾಗಿಬಿಟ್ಟಿದೆ. ಈ ಸ್ಪರ್ಧೆಯಲ್ಲಿ ಅಮಾರ್ಯಾ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಕೇವಲ ಭಾರತದ ರಾಜ್ಯಗಳು ಮತ್ತು ರಾಜಧಾನಿಗಳ ಹೆಸರನ್ನಷ್ಟೆ ಅಲ್ಲ. ಮಹಾ ಮೃತ್ಯುಂಜಯ ಮಂತ್ರ ಮತ್ತು ಗಾಯಿತ್ರಿ ಮಂತ್ರವನ್ನು ಅಮಾರ್ಯಾ ಸುಷ್ಪಷ್ಟವಾಗಿ ಹೇಳುತ್ತಾಳೆ. ಮಗಳ ಸಾಧನೆ ಮತ್ತು ಆಕೆಯ ಬುದ್ಧಿ ಶಕ್ತಿಯ ಬಗ್ಗೆ ನಮಗೆ ಹೆಮ್ಮೆ ಇದೆ ಅಂತಾರೆ ಅಮಾರ್ಯಾ ತಾಯಿ.

— ANI (@ANI) July 10, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...