alex Certify
ಕನ್ನಡ ದುನಿಯಾ       Mobile App
       

Kannada Duniya

ಪವಿತ್ರ ಮೆಟ್ಟಿಲುಗಳಿಗೆ 500 ಮೀಟರ್ ದೂರವಿದ್ದಾಗ ಹಿಂದಿರುಗಿದ ಮಹಿಳೆಯರು

ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಒದಗಿಸಬೇಕೆಂದು ತೀರ್ಪು ನೀಡಿದ ದಿನದಿಂದಲೂ ನಡೆಯುತ್ತಿರುವ ಪ್ರತಿಭಟನೆಯ ಕಾವು ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರ ಮುಂದುವರಿದ ಭಾಗ ಶುಕ್ರವಾರ ನಡೆದಿದೆ.

ಭಾರಿ ವಿರೋಧದ ನಡುವೆಯೂ ವಿಜಯದಶಮಿಯಂದು ನೂರಾರು ಪೊಲೀಸರ ರಕ್ಷಣೆಯಲ್ಲಿ ದೇವಾಲಯ ಪ್ರವೇಶಕ್ಕೆ ಮುಂದಾದ ಇಬ್ಬರು ಮಹಿಳೆಯರು ಪ್ರವೇಶಿಸಲು ಮುಂದಾದಾಗ, ಅಯ್ಯಪ್ಪ ಸ್ವಾಮಿ ದೇವಾಲಯದ ಮೆಟ್ಟಿಲು 500 ಮೀಟರ್ ದೂರದಲ್ಲಿದ್ದಾಗ, ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಬಾಗಿಲುಗಳನ್ನು ಮುಚ್ಚುವುದಾಗಿ ಪ್ರಧಾನ ಅರ್ಚಕರು ಬೆದರಿಕೆ ಹಾಕಿದ್ದಾರೆ.

ರೆಹನಾ ಫಾತೀಮಾ ಹಾಗೂ ಎಸ್. ಕವಿತಾ ಅವರು ಕೇರಳ ಪೊಲೀಸರ ಭದ್ರತೆಯೊಂದಿಗೆ ಬೆಟ್ಟವೇರಲು ಮುಂದಾಗಿದ್ದರು. ಅಯ್ಯಪ್ಪ ಸ್ವಾಮಿ ದೇವಾಲಯದ ಪವಿತ್ರ 18 ಮೆಟ್ಟಿಲುಗಳಿಗೆ 500 ಮೀ. ದೂರದಲ್ಲಿದ್ದಾಗ, ಅರ್ಚಕರ ಗುಂಪು ಪೊಲೀಸರ ಸರ್ಪಗಾವಲಿನಲ್ಲಿದ್ದ ಮಹಿಳೆಯರನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳುವುದರೊಂದಿಗೆ, ಪ್ರಧಾನ ಅರ್ಚಕ (ತಂತ್ರಿ) ಒಂದು ವೇಳೆ ಮಹಿಳೆಯರು ಪ್ರವೇಶಿಸಲು ಮುಂದಾದರೆ, ದೇವಾಲಯದ ಮುಖ್ಯದ್ವಾರವನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಬಲವಂತವಾಗಿ ಪ್ರವೇಶ ನೀಡಲು ಸಾಧ್ಯವಿಲ್ಲವೆಂದು ಕೇರಳ ಸರಕಾರ ಹೇಳಿರುವುದರಿಂದ, ಮಹಿಳೆಯರು ದೇವಾಲಯ ಪ್ರವೇಶಿಸದೆ ವಾಪಾಸಾಗಿದ್ದಾರೆ.

ಇನ್ನೊಂದು ಕಡೆ ತಿರುವಾಂಕೂರ್ ದೇವಾಸ್ವಂ ಮಂಡಳಿ, ಸುಪ್ರೀಂ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ತೀರ್ಪುನ್ನು ಜಾರಿಗೆ ತರಲು ಮುಂದಾದಾಗ ಆಗಿರುವ ತೊಂದರೆ ಬಗ್ಗೆ ವರದಿ ನೀಡಲು ನಿರ್ಧರಿಸಿದೆ. ಟಿಡಿಬಿ ಅಧ್ಯಕ್ಷ ಪದ್ಮಕುಮಾರ್ ಮಾತನಾಡಿ, ಸುಪ್ರೀಂ ಕೋರ್ಟ್ ಅದೇಶ ಪಾಲಿಸಲು ಕೇರಳ ಸರಕಾರ ಮುಂದಾಗಿರುವುದರಿಂದ ರಾಜ್ಯದಲ್ಲಿ ಹಾಗೂ ಶಬರಿಮಲೆ ಬೆಟ್ಟ ಸುತ್ತಮುತ್ತ ಉಂಟಾಗಿರುವ ತೊಂದರೆ ಬಗ್ಗೆ ವಿವರವಾಗಿ ಸುಪ್ರೀಂಗೆ ಮನವರಿಕೆ ಮಾಡಿಕೊಡಲಾಗುವುದು. ಶಬರಿಮಲೆ ದೇವಾಲಯ ಭಕ್ತಿಯಿಂದ ಪ್ರವೇಶಿಸಬೇಕೆ ಹೊರತು, ಹೋರಾಟಗಾರರ ಸ್ಥಳವಾಗಬಾರದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...