alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಕಿರುಕುಳಕ್ಕೊಗಾದವರ ಪೈಕಿ ದೂರು ನೀಡುವವರೆಷ್ಟು? ಇಲ್ಲಿದೆ ಶಾಕಿಂಗ್ ಮಾಹಿತಿ

‘ಮೀ ಟೂ’ ಕಾನ್ ಸ್ಟೆಪ್ಟ್ ಭಾರತದಲ್ಲಿ ಒಂದು ಅಭಿಯಾನದಂತೆ ನಡೆಯುತ್ತಿರುವುದು ಗೊತ್ತೇ ಇದೆ. ಇಷ್ಟೂ ದಿನ ಈ ಹಿಂದೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಲು ಹಿಂಜರಿಯುತ್ತಿದ್ದ ಮಹಿಳೆಯರು ಈಗ ಒಬ್ಬೊಬ್ಬರಾಗಿಯೇ ತಮಗಾದ ಕರಾಳ ನೋವುಗಳನ್ನು ಬಹಿರಂಗಗೊಳಿಸುತ್ತಿದ್ದಾರೆ.

ಆದರೆ ನಮ್ಮ ದೇಶದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಪ್ರತಿ ಐವರಲ್ಲಿ ಇಬ್ಬರು ಮಹಿಳೆಯರು ಈ ಬಗ್ಗೆ ಯಾರಲ್ಲೂ ಹೇಳಿಕೊಳ್ಳುವುದಿಲ್ಲ, ಪೊಲೀಸರಿಗೂ ದೂರು ನೀಡುವುದಿಲ್ಲ ಎಂದು ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.

ವಿವಾಹೇತರ ಲೈಂಗಿಕ ದೌರ್ಜನ್ಯದ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿರುವ ಕ್ಯಾಲಿಫೋರ್ನಿಯಾ ವಿವಿಯ ಲಿಂಗ ಸಮಾನತೆ ಹಾಗೂ ಆರೋಗ್ಯ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಅನಿತಾ ರಾಜ್ ಈ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಅಧ್ಯಯನದ ಪ್ರಕಾರ ಈ ಪ್ರಮಾಣ ವಯಸ್ಕ ಮಹಿಳೆಯರಿಂತ ಹದಿಹರೆಯದವರಲ್ಲೇ ಜಾಸ್ತಿ. ವಿವಾಹೇತರ ಲೈಂಗಿಕ ದೌರ್ಜನ್ಯಕ್ಕೊಳಗಾದ 15ರಿಂದ 19ರ ವಯೋಮಾನದವರಲ್ಲಿ ನಾಲ್ಕರಲ್ಲಿ ಒಬ್ಬರು ಮಾತ್ರ ಪೊಲೀಸ್ ದೂರು ದಾಖಲಿಸುತ್ತಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ 2015-16ರಲ್ಲಿ 4.4. ಲಕ್ಷ ಹದಿಹರೆಯದ ಹುಡುಗಿಯರು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಅವರಲ್ಲಿ ಶೇ.35ರಷ್ಟು ಹುಡುಗಿಯರು ಯಾರ ಸಹಾಯವನ್ನೂ ಕೇಳಿಲ್ಲ, ಮಾತ್ರವಲ್ಲ ಯಾರಲ್ಲೂ ವಿಷಯ ತಿಳಿಸಿಲ್ಲ. ಕೇವಲ ಶೇ.0.1 ರಷ್ಟು ಸಣ್ಣ ಪ್ರಮಾಣದಲ್ಲಿ ಹುಡುಗಿಯರು ತಾವು ಅನುಭವಿಸಿದ ನೋವಿನ ಬಗ್ಗೆ ಪೊಲೀಸರಿಗೆ ವರದಿ ನೀಡಿದ್ದಾರೆ. ಇದೇ ವೇಳೆ 15ರಿಂದ 49ರ ವಯೋಮಾನದವರಲ್ಲಿ ಸುಮಾರು 14 ಲಕ್ಷ ಮಂದಿ ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದು ಶೇ.42 ಮಂದಿ ಯಾರ ಸಹಾಯವನ್ನೂ ಕೇಳಿಲ್ಲ, ಯಾರಿಗೂ ತಿಳಿಸಿಯೂ ಇಲ್ಲ. ಕೇವಲ ಶೇ.1.9 ಮಂದಿಯಷ್ಟೇ ಪೊಲೀಸರಿಗೆ ದೂರು ನೀಡಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...