alex Certify
ಕನ್ನಡ ದುನಿಯಾ       Mobile App
       

Kannada Duniya

ಒಳ ಉಡುಪಿನಲ್ಲಿ ಚಿನ್ನ: ಮಹಿಳೆಯರಿಬ್ಬರ ಬಂಧನ

gold-mummb

ಮುಂಬೈ: ಮುಂಬೈ ಏರ್ ಪೋರ್ಟ್ ನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದೇಶಿ ಮಹಿಳೆಯರನ್ನು ಬಂಧಿಸಿದ್ದಾರೆ.

ಬಂಧಿತ ಮಹಿಳೆಯರು ಒಳ ಉಡುಪಿನಲ್ಲಿ ಸಾಗಿಸುತ್ತಿದ್ದ 1.2 ಕೋಟಿ ರೂಪಾಯಿ ಮೌಲ್ಯದ 4 ಕೆ.ಜಿ. ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಮಲೇಷಿಯಾದಲ್ಲಿ ವಾಸವಾಗಿರುವ 41 ಮತ್ತು 58 ವರ್ಷದ ಮಹಿಳೆಯರು ವಿಮಾನದಲ್ಲಿ ಬಂದಿಳಿದಿದ್ದಾರೆ. ಮುಂಬೈ ಏರ್ ಪೋರ್ಟ್ ನಲ್ಲಿ ಅವರನ್ನು ಅನುಮಾನದ ಮೇಲೆ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದಾರೆ.

ಪರಿಶೀಲನೆ ಸಂದರ್ಭದಲ್ಲಿ ಒಳ ಉಡುಪುಗಳಲ್ಲಿ ಚಿನ್ನ ಕಂಡು ಬಂದಿದೆ. ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ವ್ಯಕ್ತಿಗೆ ಈ ಚಿನ್ನ ನೀಡುವ ಉದ್ದೇಶವಿತ್ತು ಎಂದು ಮಹಿಳೆಯರು ತಿಳಿಸಿದ್ದಾರೆ.

ಕೊನೆಗೆ ನಿಲ್ದಾಣದ ಹೊರಗೆ ಈ ಮಹಿಳೆಯರಿಗಾಗಿ ಕಾಯುತ್ತಿದ್ದ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ಮಲೇಷಿಯಾದಿಂದ ಚಿನ್ನವನ್ನು ಸಾಗಿಸುತ್ತಿರುವುದು ಗೊತ್ತಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...