alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ್ಮನೆಯವರಿಗೆ ಆಭರಣ ತೋರಿಸಿ ಜೀವ ಕಳೆದುಕೊಂಡಳು

ಕೆಲವೇ ತಿಂಗಳ ಹಿಂದೆ ಮದುವೆಯಾಗಿದ್ದ ಯುವತಿ ತನ್ನ ಪಕ್ಕದ ಮನೆಯವರಿಗೆ ವಿವಾಹದ ಆಭರಣಗಳನ್ನು ತೋರಿಸಿದ್ದೇ ಅವಳ ಜೀವಕ್ಕೆ ಮುಳುವಾಗಿದೆ. ಪರಿಣಾಮ, ಆಕೆಯ ಶವ ಸೂಟ್‍ಕೇಸ್‍ನಲ್ಲಿ ಪತ್ತೆಯಾಗಿದ್ದು, ಘಟನೆಗೆ ಕಾರಣವಾಗಿರುವ ಸೌರಭ್ ದಿವಾಕರ್ ಹಾಗೂ ರಿತು ದಂಪತಿಯನ್ನು ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

ನವವಿವಾಹಿತೆ ಮಾಲಾ ತನ್ನ ಪತಿ ಶಿವಮ್ ಜೊತೆ ಘಾಜಿಯಾಬಾದ್‍ನ ಬಿಸರಕ್ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಕಳೆದ ಗುರುವಾರ ಮನೆಗೆ ಬಂದಿದ್ದ ನೆಂಟರಿಗೆ ಮಾಲಾ ತನ್ನ ಮದುವೆಯ ಆಭರಣ ಹಾಗೂ ಬಟ್ಟೆಗಳನ್ನು ತೋರಿಸಿದ್ದರು.

ಇದನ್ನು ಪಕ್ಕದ ಮನೆಯಲ್ಲಿದ್ದ ರಿತು ಗಮನಿಸಿದ್ದಳು. ಈ ಬಗ್ಗೆ ತನ್ನ ಪತಿ ಸೌರಭ್ ಜೊತೆ ಮಾತನಾಡಿದ್ದ ರಿತು, ಶಿವಮ್ ಕೆಲಸಕ್ಕೆ ಹೋಗಿದ್ದ ಸಮಯ ನೋಡಿ ಮಾಲಾಳನ್ನು ತನ್ನ ಮನೆಗೆ ಆಭರಣ ಹಾಗೂ ಬಟ್ಟೆ ಸಹಿತ ಬರುವಂತೆ ಪುಸಲಾಯಿಸಿದ್ದಳು. ಹೀಗೆ ಆಭರಣ ಹಾಗೂ ಬಟ್ಟೆ ತೋರಿಸಲೆಂದು ಬಂದಿದ್ದ ಮಾಲಾಳನ್ನು ರಿತು-ಸೌರಭ್ ದಂಪತಿ ಹತ್ಯೆ ಮಾಡಿದ್ದು, ಆಭರಣಗಳನ್ನು ತೆಗೆದುಕೊಂಡು ಶವವನ್ನು ಅದೇ ಸೂಟ್‍ಕೇಸ್‍ಗೆ ಹಾಕಿ ಘಾಜಿಯಾಬಾದ್‍ನಲ್ಲಿ ಎಸೆದಿದ್ದರು.

ಕೆಲಸದಿಂದ ಮರಳಿದ ಶಿವಮ್, ಪತ್ನಿ ಕಾಣೆಯಾಗಿದ್ದಾಳೆಂದು ಬಿಸರಕ್ ಠಾಣೆಗೆ ದೂರು ನೀಡಿದ್ದರು. ಮಾರನೇ ದಿನ ಸೂಟ್‍ಕೇಸ್ ಪತ್ತೆಯಾಗಿದ್ದು, ಅದರಲ್ಲಿದ್ದ ಶವ ಮಾಲಾಳ ಚಹರೆಗೆ ತಾಳೆಯಾದ್ದರಿಂದ ಹಂತಕರು ಸಿಕ್ಕಿಬಿದ್ದಿದ್ದು, ರಿತು-ಸೌರಭ್ ದಂಪತಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಘಾಜಿಯಾಬಾದ್ ಗೌತಮ್‍ಬುದ್ದ ನಗರ ಎಸ್‍ಪಿ ಅಜಯ್‍ಪಾಲ್ ಶರ್ಮಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...