alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿ ದಾಟುತ್ತಿದ್ದ ಆನೆಗಳಿಗೆ ರೈಲು ಡಿಕ್ಕಿ

elephants-crossing-track-384x278ಹಳಿ ದಾಟುತ್ತಿದ್ದ ಆನೆಗಳಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿ ಮತ್ತೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂ ನ ನಾಗೋನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಕಾಮ್ಪುರ್ ನ ಪೊಟಿಯಪಂ ನಲ್ಲಿ ಆನೆಗಳು ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎರಡು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮತ್ತೊಂದು ಆನೆ ತೀವ್ರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದೆ ಎನ್ನಲಾಗಿದೆ.

ಈ ತಿಂಗಳೊಂದರಲ್ಲೇ ಅಸ್ಸಾಂನಲ್ಲಿ ಒಟ್ಟು 8 ಆನೆಗಳು ರೈಲು ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದು, ಆನೆಗಳು ಹಳಿ ದಾಟುವ ಸ್ಥಳವನ್ನು ಗುರುತಿಸಿರುವೆಡೆ ರೈಲು 40 ಕಿ.ಮೀ. ವೇಗದಲ್ಲಿ ಚಲಿಸುವುದನ್ನು ನಿಗದಿಪಡಿಸಲಾಗಿದೆ. ಆದರೆ ದುರಂತ ನಡೆದ ಸ್ಥಳ ಈ ವಲಯದಲ್ಲಿರಲಿಲ್ಲವೆಂದು ಹೇಳಲಾಗಿದೆ. ಆನೆಗಳ ಮೃತದೇಹ ರೈಲು ಹಳಿ ಮೇಲೆ ಬಿದ್ದಿದ್ದ ಕಾರಣ ತೆರವುಗೊಳಿಸುವವರೆಗೂ ಆನೇಕ ರೈಲುಗಳ ಸಂಚಾರವನ್ನು ಕೆಲ ಕಾಲ ತಡೆಹಿಡಿಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...