alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಾ ಬಂಧನದ ದಿನದಂದೇ ಸಹೋದರಿ ಕಣ್ಣ ಮುಂದೆ ನದಿ ಪಾಲಾದ ಸಹೋದರರು

ರಕ್ಷಾ ಬಂಧನ ನಿಮಿತ್ತ ತಮ್ಮ ಭಾಗದ ಸಂಪ್ರದಾಯವಾದ ಕಾಜ್ಲಿ ವಿಸರ್ಜನ್ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಸಹೋದರರು ರಾಖಿ ಕಟ್ಟಿಸಿಕೊಳ್ಳುವ ಮುನ್ನವೇ ಸಹೋದರಿಯ ಕಣ್ಣ ಮುಂದೆಯೇ ನದಿ ಪಾಲಾದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಕಶಾಯ್ ಎಂಬ ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಾಂದಾ ಎಂಬಲ್ಲಿ ರಕ್ಷಾ ಬಂಧನ್ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಶ್ಯಾಮು ವರ್ಮ (17) ಹಾಗೂ ಭಾನು ವರ್ಮ (15) ಎಂಬ ಸಹೋದರರು ತಮ್ಮ ಸಹೋದರಿಯೊಂದಿಗೆ ಸಮೀಪದ ಮಂದಾಕಿನಿ ನದಿಗೆ ತೆರಳಿದ್ದರು.

ರಾಖಿ ಕಟ್ಟಿಸಿಕೊಳ್ಳುವ ಮುನ್ನ ಕಾಜ್ಲಿ ಸಂಪ್ರದಾಯದಂತೆ ನದಿಯಲ್ಲಿ ಸ್ನಾನ ಮಾಡಬೇಕಾಗುತ್ತದೆ. ಈ ವೇಳೆ ಶ್ಯಾಮು ವರ್ಮ ಕಾಲುಜಾರಿ ನದಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಭಾನು ವರ್ಮ ಕೂಡ ನದಿಗೆ ಧುಮುಕಿದ್ದಾನೆ. ಇಬ್ಬರೂ ನದಿಯಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...