alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಧ್ ಗಯಾದಲ್ಲಿ 2 ಸಜೀವ ಬಾಂಬ್ ಪತ್ತೆ

ಬಿಹಾರದ ಬೋಧ್ ಗಯಾದಲ್ಲಿ ಎರಡು ಕ್ರೂಡ್ ಬಾಂಬ್ ಪತ್ತೆಯಾಗಿದೆ. ಬೋಧ್ ಗಯಾ ಬೌದ್ಧರ ಪವಿತ್ರ ಕ್ಷೇತ್ರ. 2013ರಲ್ಲೂ ಇದನ್ನು ಟಾರ್ಗೆಟ್ ಮಾಡಲಾಗಿತ್ತು. ಮಹಾಬೋಧಿ ದೇವಾಲಯದ ಆವರಣದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. ಹಲವರು ಗಾಯಗೊಂಡಿದ್ದರು.

ಒಟ್ಟು 10 ಬಾಂಬ್ ಗಳನ್ನು ಇಡಲಾಗಿತ್ತು. ಅವುಗಳಲ್ಲಿ ಮೂರು ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಉಳಿದೆಲ್ಲಾ ಬಾಂಬ್ ಗಳು ಒಂದು ಗಂಟೆಯೊಳಗೆ ಸ್ಫೋಟಿಸಿದ್ದವು. ಇದೀಗ ಪಾಟ್ನಾದಿಂದ 100 ಕಿಮೀ ದೂರದಲ್ಲಿ ಬಾಂಬ್ ಗಳು ಪತ್ತೆಯಾಗಿವೆ.

ಕಾಲಚಕ್ರ ಗ್ರೌಂಡ್ ಬಳಿ ಸಣ್ಣ ಪ್ರಮಾಣದ ಸ್ಫೋಟ ನಡೆದಿತ್ತು. ನಂತರ ಪೊಲೀಸರು ಪರಿಶೀಲನೆ ನಡೆಸಿದಾಗ 2 ಬಾಂಬ್ ಸಿಕ್ಕಿದೆ. ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ತಮ್ಮ ಪ್ರವಚನವನ್ನು ಮುಗಿಸಿದ ಬೆನ್ನಲ್ಲೇ ಬಾಂಬ್ ಸ್ಫೋಟಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...