alex Certify
ಕನ್ನಡ ದುನಿಯಾ       Mobile App
       

Kannada Duniya

ಆಗ್ರಾದ ಎರಡು ಕಡೆ ಸ್ಫೋಟ

agra-blast-security-on-spot_650x400_71489815394

ಉತ್ತರ ಪ್ರದೇಶದ ಆಗ್ರಾ ಜನತೆ ಬೆಚ್ಚಿಬಿದ್ದಿದ್ದಾರೆ. ಆಗ್ರಾದ ಎರಡು ಕಡೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲವೆಂದು ಮೂಲಗಳು ತಿಳಿಸಿವೆ.

ಒಂದು ಸ್ಫೋಟ ಆಗ್ರಾದ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದೆ. ಇನ್ನೊಂದು ಸ್ಫೋಟ ಮನೆಯೊಂದರಲ್ಲಿ ಸಂಭವಿಸಿದೆ. ಸ್ಫೋಟ ಸಂಭವಿಸಿದ ಮನೆ ಅಶೋಕ್ ಎಂಬವರಿಗೆ ಸೇರಿದ್ದು ಎನ್ನಲಾಗಿದ್ದು, ಡಿಐಜಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಮಾಹಿತಿ ಪ್ರಕಾರ ನಿನ್ನೆ ತಡರಾತ್ರಿ ರೈಲ್ವೆ ಟ್ರ್ಯಾಕ್ ಬಳಿ  ಬೆದರಿಕೆ ಪತ್ರವೊಂದು ಸಿಕ್ಕಿತ್ತು ಎನ್ನಲಾಗಿದೆ.

ಆಂತರಿಕ ಸಚಿವಾಲಯ ಕೂಡ ತಾಜ್ ಮಹಲ್ ಬಳಿ ಭಯೋತ್ಪಾದನಾ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಈ ಮೊದಲೇ ಎಚ್ಚರಿಕೆ ನೀಡಿದೆ. ತಾಜ್ ಮಹಲ್ ಗುರಿಯಾಗಿಸಿಕೊಂಡು ದಾಳಿ ನಡೆಯುವ ಸಾಧ್ಯತೆ ಇದ್ದು, ಇದು ದೊಡ್ಡ ಮಟ್ಟದ ಆತ್ಮಾಹುತಿ ದಾಳಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಸ್ಫೋಟದ ಹಿನ್ನೆಲೆಯಲ್ಲಿ ತಾಜ್ ಮಹಲ್ ಗೆ ಭದ್ರತೆ ಹೆಚ್ಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...