alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯರ ಕಿರುಕುಳದಿಂದ ನೊಂದ ಪುರುಷರಿಗೆ ಖುಷಿ ಸುದ್ದಿ

ಕಾನೂನಿನ ದುರಪಯೋಗಪಡಿಸಿಕೊಂಡು, ಪತ್ನಿಯರ ಕಿರುಕುಳದಿಂದ ನೊಂದ ಪತಿಯರ ರಕ್ಷಣೆಗಾಗಿ ಆಯೋಗವನ್ನು ರಚಿಸುವಂತೆ ಇಬ್ಬರು ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರೆ.

ಉತ್ತರ ಪ್ರದೇಶದ ಘೋಸಿ ಸಂಸದ ಹರಿನಾರಾಯಣ್ ರಾಜ್ಭರ್ ಹಾಗೂ ಹಾರ್ದೊಯ್ ಸಂಸದ ಅನ್ಸುಲ್ ವರ್ಮಾ ಸೆಪ್ಟಂಬರ್ 23 ರಂದು ಪುರುಷ ಆಯೋಗ ಜಾರಿಗೊಳಿಸಲು ಒತ್ತಾಯಿಸಿ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದ್ದಾರೆ.

ಪತ್ನಿಯರಿಂದಲೂ ಕಿರುಕುಳಕ್ಕೆ ಒಳಗಾದ ಪುರುಷರು ಇದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿ ಸಾಕಷ್ಟು ಅರ್ಜಿಗಳು ಸಲ್ಲಿಕೆ ಆಗಿವೆ. ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಕಾನೂನು ಇದೆ. ಆದ್ರೆ, ಪುರುಷರ ಸಮಸ್ಯೆಗಳನ್ನು ಆಲಿಸೋದು ಯಾರು ಎಂದು ಹರಿನಾರಾಯಣ್ ರಾಜ್ಭರ್ ಪ್ರಶ್ನಿಸಿದ್ದಾರೆ.

ಎಲ್ಲ ಪುರುಷ ಹಾಗೂ ಮಹಿಳೆ ಕೆಟ್ಟವರು ಎಂದು ಹೇಳಲು ಸಾಧ್ಯವೇ ಇಲ್ಲ. ಕೆಲವು ಜನ ಕಿರುಕುಳ ನೀಡ್ತಾ ಇದ್ದಾರೆ. ಪುರುಷರಿಗೂ ಆಯೋಗ ರಚಿತವಾದ್ರೆ, ನೊಂದ ಪುರುಷರು ತಮ್ಮ ಅಳಲನ್ನು ತೋಡಿಕೊಳ್ಳಲು ಸಹಾಯಕವಾಗುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...