alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಜನಿಸಿದ್ದ ಮಗುವಿಗೆ ಇಟ್ಟಿದ್ದಾರೆ ಈ ಹೆಸರು

1st-baby-born-on-board-jet-airways-named-jetson30 ವಾರಗಳ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸಬೇಕೆಂದರೆ ವೈದ್ಯರಿಂದ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ. 35 ವಾರದ ಗರ್ಭಿಣಿಯರು ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ಒಮ್ಮೊಮ್ಮೆ ವೈದ್ಯರು ನಿಗದಿಪಡಿಸಿದ್ದಕ್ಕಿಂತ ದಿನಾಂಕಕ್ಕಿಂತ ಮುನ್ನವೇ ಹೆರಿಗೆಯಾಗುವ ಸಾಧ್ಯತೆಗಳಿರುತ್ತವೆ. ಹಾಗೇ ಅವಧಿ ಪೂರ್ವ ವಿಮಾನದಲ್ಲಿ ಜನಿಸಿದ ಮಗುವಿಗೆ ವಿಶಿಷ್ಟ ನಾಮಕರಣ ಮಾಡಲಾಗಿದೆ.

29 ವರ್ಷದ ಸಿ. ಜೋಸ್ ಜೂನ್ 18 ರಂದು ಜೆಟ್ ಏರ್ವೇಸ್ ನಲ್ಲಿ ದಮ್ಮಾಮ್ ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸುತ್ತಿದ್ದರು. ವಿಮಾನ ಆಗಸದಲ್ಲಿದ್ದಾಗಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಹಾಯಕ್ಕಾಗಿ ಅವರು ಕೂಗಿದಾಗ ವಿಮಾನದಲ್ಲಿ ವೈದ್ಯರಿದ್ದರಾ ಎಂಬುದರ ಕುರಿತು ಸಿಬ್ಬಂದಿ ಅನೌನ್ಸ್ ಮಾಡಿದ್ದಾರೆ. ಆದರೆ ವಿಮಾನದಲ್ಲಿದ್ದ ಬಹುತೇಕ ಸಿಬ್ಬಂದಿ ಕೇವಲ ಒಂದೆರೆಡು ವರ್ಷಗಳ ಸೇವೆ ಮಾಡಿದವರಾಗಿದ್ದು, ಇಂತಹ ಕಠಿಣ ಸಂದರ್ಭದಲ್ಲಿ ಏನು ಮಾಡಬೇಕೆಂಬ ಗೊಂದಲಕ್ಕೊಳಗಾಗಿದ್ದಾರೆ.

ಅಂತಹ ಕಠಿಣ ಸಂದರ್ಭದಲ್ಲೂ ಎದೆಗುಂದದ ಅವರುಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ಯಾರಾ ಮೆಡಿಕ್ಸ್ ಒಬ್ಬರ ನೆರವು ಪಡೆದಿದ್ದಾರೆ. ಹೆರಿಗೆ ನೋವು ಅನುಭವಿಸುತ್ತಿದ್ದ ಜೋಸ್ ಏಳೆಂಟು ನಿಮಿಷಗಳಲ್ಲೇ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಿದ್ದಾರೆ. ಅಷ್ಟರಲ್ಲಾಗಲೇ ವಿಮಾನದ ಪೈಲೆಟ್ ತುರ್ತು ಲ್ಯಾಂಡಿಂಗ್ ಗಾಗಿ ಮುಂಬೈ ವಿಮಾನ ನಿಲ್ದಾಣವನ್ನು ಸಂಪರ್ಕಿಸಿದ್ದು, ಅನುಮತಿ ಮೇರೆಗೆ ಅಲ್ಲಿ ಲ್ಯಾಂಡ್ ಮಾಡಿದ್ದಾರೆ.

ತಾಯಿ ಹಾಗೂ ಮಗು ಆರೋಗ್ಯವಾಗಿದ್ದು, ತಮಗೆ ಸಕಾಲಿಕ ನೆರವು ನೀಡಿದ ಜೆಟ್ ಏರ್ವೇಸ್ ಸಿಬ್ಬಂದಿಗೆ ಧನ್ಯವಾದ ಹೇಳಿರುವ ಜೋಸ್, ತಮ್ಮ ಮಗುವಿಗೆ ‘ಜೆಟ್ ಸನ್’ ಎಂದು ನಾಮಕರಣ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...