alex Certify
ಕನ್ನಡ ದುನಿಯಾ       Mobile App
       

Kannada Duniya

ಜೂನ್ 16ಕ್ಕೆ ಪಾತಕಿ ಅಬು ಸಲೇಂ ಹಣೆಬರಹ ನಿರ್ಧಾರ

598704-abu-salem

1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಅಬು ಸಲೇಂ ಹಾಗೂ ಇತರ 6 ಮಂದಿ ವಿರುದ್ಧದ ಪ್ರಕರಣದ ತೀರ್ಪನ್ನು ಮುಂಬೈನ ವಿಶೇಷ ನ್ಯಾಯಾಲಯ ಜೂನ್ 16ಕ್ಕೆ ಪ್ರಕಟಿಸಲಿದೆ. ಇವತ್ತು ವಿಚಾರಣೆ ವೇಳೆ ಎಲ್ಲಾ 7 ಆರೋಪಿಗಳನ್ನೂ ವಿಶೇಷ ಟಾಡಾ ಕೋರ್ಟ್ ನ್ಯಾಯಾಧೀಶರಾದ ಜಿ.ಎ.ಸನಪ್ ಅವರ ಎದುರು ಹಾಜರುಪಡಿಸಲಾಯ್ತು.

ಅಬು ಸಲೇಂ, ಮುಸ್ತಫಾ ದೊಸ್ಸಾ, ಮೊಹಮ್ಮದ್ ತಾಹಿರ್ ಮರ್ಚಂಟ್, ಅಬ್ದುಲ್ ಕಯ್ಯುಮ್, ಕರೀಮುಲ್ಲಾ ಖಾನ್ ಹಾಗೂ ರಿಯಾಜ್ ಸಿದ್ದಿಕಿ ಈ ಪ್ರಕರಣದ ಪ್ರಮುಖ ಆರೋಪಿಗಳು. 1995ರಲ್ಲಿ ನಡೆದ ಬಿಲ್ಡರ್ ಪ್ರದೀಪ್ ಜೈನ್ ಹತ್ಯೆ ಪ್ರಕರಣದಲ್ಲಿ ಅಬು ಸಲೇಂಗೆ ಜೀವಾವಧಿ ಶಿಕ್ಷೆಯಾಗಿದೆ. ಸದ್ಯ ಪಾತಕಿ ರಾಯ್ಗಡದ ತಲೋಜಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್, ಯಾಕೂಬ್ ಮೆಮನ್ ಸೇರಿ 100 ಮಂದಿ ಅಪರಾಧಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. 2015ರಲ್ಲಿ ಯಾಕೂಬ್ ಮೆಮನ್ ನನ್ನು ಗಲ್ಲಿಗೇರಿಸಲಾಗಿದೆ. ಸಂಜಯ್ ದತ್ 2016ರ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

1993ರ ಮಾರ್ಚ್ 12ರಂದು ಮುಂಬೈನ ವಿವಿಧೆಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿದ್ದು, 700 ಜನರು ಗಾಯಗೊಂಡಿದ್ರು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಆತನ ಬಲಗೈ ಬಂಟ ಟೈಗರ್ ಮೆಮೊನ್ ಈ ಕೃತ್ಯ ನಡೆಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...