alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪಿ ಬಂಧನಕ್ಕೆ ಪತಿ ಜೊತೆ 900 ಕಿ.ಮೀ. ಪ್ರಯಾಣ ಬೆಳೆಸಿದ್ಲು ಮಹಿಳೆ

ಆನ್ಲೈನ್ ಕಿರುಕುಳಕ್ಕೆ ಬೇಸತ್ತು ಆರೋಪಿ ಬಂಧನಕ್ಕೆ 19 ವರ್ಷದ ಮಹಿಳೆಯೊಬ್ಬಳು ತನ್ನ ಪತಿ ಜೊತೆ 900 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದಾಳೆ. ಮಹಿಳೆ, ಆರೋಪಿಯನ್ನು ಹಿಡಿದಿದ್ದಲ್ಲದೆ ಪೊಲೀಸ್ ಗೆ ಒಪ್ಪಿಸಿದ್ದಾಳೆ.

ಮಹಿಳೆ ಹಾಡುಗಾರ್ತಿ ಮತ್ತು ಮಾಡೆಲ್. ಮಹಿಳೆ ಮೊದಲು ದೆಹಲಿ ಪೊಲೀಸ್ ಹಾಗೂ ಕ್ರೈಂ ಬ್ರ್ಯಾಂಚ್ ಗೆ ದೂರು ನೀಡಿದ್ದಳು. ಆದ್ರೆ ಪೊಲೀಸರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆರೋಪಿ ಹೆಸ್ರು ಶಕೀರ್ ಹುಸೇನ್. ಆರೋಪಿ ಬೆಂಗಳೂರಿಗೆ ಬರುವಂತೆ ಹೇಳಿದ್ದ ಎನ್ನಲಾಗಿದೆ.

ಮಹಿಳೆ ಎರಡು ದಿನ ತನ್ನ ಜೊತೆ ಕಳೆದ್ರೆ ಫೋಟೋ, ತನ್ನ ಬಳಿ ಇರುವ ಮಾಹಿತಿ ಡಿಲಿಟ್ ಮಾಡುವುದಾಗಿ ಹೇಳಿದ್ದನಂತೆ. ಬೆಂಗಳೂರಿಗೆ ಬರುವ ಬದಲು ಮಹಿಳೆ ಖಾಂಡ್ವಾಗೆ ಬರುವಂತೆ ಕರೆ ಮಾಡಿದ್ದಳು ಎನ್ನಲಾಗಿದೆ. ಆರೋಗ್ಯ ಸರಿಯಿಲ್ಲ. ಹಾಗಾಗಿ ಖಾಂಡ್ವಾಗೆ ಬರುವಂತೆ ಹೇಳಿದ್ದಳಂತೆ. ಅಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಪ್ರಕರಣವನ್ನು ದೆಹಲಿ ಪೊಲೀಸರಿಗೆ ವರ್ಗ ಮಾಡಿದ್ದು ಅವ್ರು ವಿಚಾರಣೆ ನಡೆಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...