alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ನಂತರದ ಜಗಳದಲ್ಲಿ ಕಿವಿಯನ್ನೇ ಕಳೆದುಕೊಂಡ ಯುವಕ

ನವದೆಹಲಿ: ಒಂದು ಸಣ್ಣ ರಸ್ತೆ ಅಪಘಾತ ವಾದ-ವಿವಾದಕ್ಕೆ ತಿರುಗಿ ದುಷ್ಕರ್ಮಿ, ವಿದ್ಯಾರ್ಥಿಯೊಬ್ಬನ ಕಿವಿ ಕಚ್ಚಿ ತುಂಡರಿಸಿರುವ ವಿಚಿತ್ರ ಘಟನೆ ದೆಹಲಿಯಲ್ಲಿ ನಡೆದಿದೆ.

ತಕ್ಷಣವೆ ಆತ ರಸ್ತೆಯಲ್ಲಿ ಬಿದ್ದ ಕಿವಿಯ ತುಂಡಿನೊಂದಿಗೆ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಒಂದು ವೇಳೆ ಬೇರ್ಪಟ್ಟ ಕಿವಿ ತುಂಡು ಜೋಡಣೆಯಾಗದಿದ್ದರೆ ಪ್ಲಾಸ್ಟಿಕ್ ಸರ್ಜರಿ ಅನಿವಾರ್ಯವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

19 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಅಜಯ್ ಠಾಕೂರ್ ತನ್ನ ಮೋಟರ್ ಸೈಕಲ್ ನಲ್ಲಿ ಸ್ನೇಹಿತನಿಗೆ ಡ್ರಾಪ್ ನೀಡಲು ಹೋಗುತ್ತಿದ್ದಾಗ ಅಪಘಾತ ನಡೆದಿತ್ತು.

ನಾನು ಸಾಗುತ್ತಿದ್ದ ದಾರಿಗೆ ಎದುರಿನಿಂದ ಬಂದ ಸ್ಕೂಟರ್ ಸವಾರರು ತಾಗಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆದರೆ ಅಲ್ಲಿದ್ದ ಕೆಲವು ಜನ ಸಮಾಧಾನಪಡಿಸಿ ಕಳಿಸಿದ್ದರು. ಆದರೆ, ನಾನು ಸ್ನೇಹಿತನನ್ನು ಬಿಟ್ಟು ಅದೇ ದಾರಿಯಲ್ಲಿ ಬರುವಾಗ ಆ ಸ್ಕೂಟರ್ ಸವಾರರು ಅಡ್ಡಗಟ್ಟಿದರು. ಪುನಃ ವಾದ-ವಿವಾದ ನಡೆಯಿತು ಎಂದು ಅಜಯ್ ಠಾಕೂರ್ ಘಟನೆ ಬಗ್ಗೆ ವಿವರಿಸಿದ್ದಾರೆ.

ಆ ಅಪರಿಚಿತರು ಸ್ಕೂಟರ್ ಗೆ ಹಾನಿಯಾಗಿದೆ ಎಂದು ವಾದಿಸಿದರಲ್ಲದೇ ಈ ಸಂದರ್ಭದಲ್ಲಿ ತಳ್ಳಾಡಿದರು. ಅವರಲ್ಲಿ ಒಬ್ಬ ನನ್ನ ಬೈಕ್ ಕೀ ಕಿತ್ತುಕೊಂಡು ನನ್ನ ಮುಖಕ್ಕೆ, ತಲೆಗೆ ಗುದ್ದಿದ್ದಾನೆ. ಮತ್ತೊಬ್ಬ ಕಿವಿಯನ್ನು ಕಚ್ಚಿ ಹರಿದಿದ್ದಾನೆ. ಈ ಗಾಬರಿಯಲ್ಲಿ ನಾನು ಅವರ ಸ್ಕೂಟರ್ ನೋಂದಣಿ ಸಂಖ್ಯೆ ನೋಡಲಾಗಲಿಲ್ಲ ಎಂದು ಅಜಯ್ ಠಾಕೂರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...