alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಪಡೆ ಸೇರಿದ್ದಾರೆ 186 ಮಂದಿ ಟೆಕ್ಕಿಗಳು…! ಕಾರಣವೇನು ಗೊತ್ತಾ…?

ಹೌದು….ವೈಟ್ ಕಾಲರ್ ಕೆಲಸ ಹಿಡಿಯಬೇಕಾಗಿದ್ದ 186 ಮಂದಿ ಟೆಕಿಗಳು ಈಗ ಖಾಕಿ ಧರಿಸಿದ್ದಾರೆ. ಅವರೀಗ ಪಂಜಾಬ್ ಪೊಲೀಸ್ ಕಾನ್ಸ್ಟೇಬಲ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಪ್ರೊಬೆಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಮಾಸಿಕ ವೇತನ 10 ಸಾವಿರ ರೂಪಾಯಿ.

ಪಂಜಾಬ್ ಪೊಲೀಸ್ ಇಲಾಖೆ ವತಿಯಿಂದ 9 ತಿಂಗಳ ತರಬೇತಿ ಮುಗಿಸಿ ಗುರುವಾರವಷ್ಟೇ ಕೆಲಸಕ್ಕೆ ಹಾಜರಾದ 257 ಮಂದಿ ಪೈಕಿ 186 ಜನ ಟೆಕಿಗಳು. “ಟ್ರೈನಿಗಳ ಪೈಕಿ 6 ಜನ ಎಂಟೆಕ್ ಮಾಡಿದ್ದು ಉಳಿದ 180 ಜನರಲ್ಲಿ ಎಂಎಸ್‍ಸಿ ಐಟಿ, ಬಿಎಸ್‍ಸಿ ಐಟಿ, ಎಂಸಿಎ, ಬಿಸಿಎ ಹಾಗೂ ಇನ್‍ಫಾರ್ಮೇಷನ್ ಟೆಕ್ನಾಲಜಿ ಕುರಿತ ಡಿಪ್ಲೊಮಾ ಮಾಡಿದವರಿದ್ದಾರೆ” ಎನ್ನುತ್ತಾರೆ ಟ್ರೈನಿಂಗ್ ಸೆಂಟರ್ ನ ಕಮಾಂಡೆಂಟ್ ರಾಜಪಾಲ್ ಸಿಂಗ್.

“ಈ ಹಿಂದೆ ತಾಂತ್ರಿಕ ಸಿಬ್ಬಂದಿಯನ್ನು ಬೇರೆ ವಿಭಾಗಗಳಿಂದ ನಿಯೋಜಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ತಾಂತ್ರಿಕ ಪರಿಣತರನ್ನೇ ನೇರವಾಗಿ ನೇಮಿಸಿಕೊಳ್ಳಲಾಗಿದೆ. ಇಂಥ ಹುದ್ದೆಗಳಿಗೆ ಕಂಪ್ಯೂಟರ್ ಸಂಬಂಧಿತ ಕೋರ್ಸ್‍ಗಳ ಪದವಿ ಇದ್ದರೆ ಸಾಕು” ಎಂದು ರಾಜ್‍ಪಾಲ್ ತಿಳಿಸಿದ್ದಾರೆ.

“ನಾನು ಖಾಸಗಿ ಕಂಪನಿಯಲ್ಲಿ 2 ವರ್ಷ ಕೆಲಸ ಮಾಡಿದ್ದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅರೆ ಸರ್ಕಾರಿ ನೌಕರನಾಗಿಯೂ ಕೆಲಸ ಮಾಡಿದ್ದೆ. ಖಾಸಗಿ ಕ್ಷೇತ್ರದಲ್ಲಿ ಅವಕಾಶ ಕಡಿಮೆ, ಸರ್ಕಾರಿ ಉದ್ಯೋಗದಲ್ಲಿ ಭದ್ರತೆ ಜಾಸ್ತಿ. ನನಗೆ ಈಗ ಇಲ್ಲಿ ಎರಡು ವರ್ಷಗಳ ಪ್ರೊಬೆಷನರಿ ಅವಧಿಯಲ್ಲಿ 10 ಸಾವಿರ ವೇತನ ಸಿಗುತ್ತದೆ. ಆ ಬಳಿಕ ತಿಂಗಳಿಗೆ 40 ಸಾವಿರ ಸಿಗುತ್ತೆ” ಎನ್ನುತ್ತಾರೆ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಅಗಿ ನೇಮಕಗೊಂಡಿರುವ ಎಂಸಿಎ ಪದವೀಧರ ಆಶಿಷ್ ಶರ್ಮಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...