alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡೆಯಿತು ಬೆಚ್ಚಿ ಬೀಳಿಸುವ ಕೃತ್ಯ

chandigarh-attack_650ಹಾಡಹಗಲೇ ನಟ್ಟ ನಡು ರಸ್ತೆಯಲ್ಲೇ ಆ ಭೀಕರ ಕೃತ್ಯ ನಡೆಯುತ್ತಿದ್ದರೂ ಸಾರ್ವಜನಿಕರು ಮಾತ್ರ ಮೂಕ ಪ್ರೇಕ್ಷಕರಾಗಿದ್ದರು. ತಮ್ಮ ದುಷ್ಕೃತ್ಯ ಮುಗಿಸಿದ ಹಂತಕರು, ಕ್ಷಣಾರ್ಧದಲ್ಲೇ ಪರಾರಿಯಾಗಿದ್ದು, ಈ ಎಲ್ಲಾ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಇಂತದೊಂದು ಘಟನೆ ಬುಧವಾರದಂದು ಚಂಡೀಘಡದ ಮಾರ್ಕೆಟ್ ಬಳಿ ನಡೆದಿದೆ. 18 ವರ್ಷದ ಯುವಕನೊಬ್ಬ ತನ್ನ ಸ್ನೇಹಿತರಿಬ್ಬರ ಜೊತೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಅಡ್ಡಗಟ್ಟಿದ ನಾಲ್ಕು ಮಂದಿಯಿದ್ದ ಹಂತಕರ ತಂಡ, ತಮ್ಮ ಬಳಿಯಿದ್ದ ಕತ್ತಿ, ಮಚ್ಚು ಹಾಗೂ ದೊಣ್ಣೆಯಿಂದ ಆತನನ್ನು ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಯುವಕ ಸಹಾಯಕ್ಕಾಗಿ ಗೋಗರೆಯುತ್ತಿದ್ದರೂ ಅಲ್ಲಿದ್ದ ಸಾರ್ವಜನಿಕರ್ಯಾರು ನೆರವಿಗೆ ಧಾವಿಸಿಲ್ಲ. ಅಂತಿಮವಾಗಿ ವ್ಯಕ್ತಿಯೊಬ್ಬರು ಓಡಿ ಬಂದಿದ್ದು, ಅಷ್ಟರಲ್ಲಾಗಲೇ ರಾಕ್ಷಸಿ ಕೃತ್ಯವೆಸಗಿದ್ದ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಸನಿಹದ ಅಂಗಡಿಯೊಂದರಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಈ ಎಲ್ಲಾ ದೃಶ್ಯಾವಳಿಗಳು ಸೆರೆಯಾಗಿವೆ. ಹಳೆ ದ್ವೇಷದಿಂದ ಈ ಹತ್ಯೆ ನಡೆದಿರಬಹುದೆಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...