alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು ಕಡಿತಕ್ಕೆ ಈ ರಾಜ್ಯದಲ್ಲಿ ಬಲಿಯಾದವರೆಷ್ಟು ಗೊತ್ತಾ…?

ಹಾವಿನ ದ್ವೇಷ 12 ವರ್ಷ ಅಂತಾರೆ. ಆದ್ರೆ ಈ ರಾಜ್ಯಕ್ಕೆ ಸರ್ಪದೋಷ ಇದೆ ಅನ್ಸುತ್ತೆ. ಕಾರಣ ಒಡಿಶಾದಲ್ಲಿ ಕಳೆದ ಮೂರು ವರ್ಷದಲ್ಲಿ ಸರಿ ಸುಮಾರು 1,716 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಡಿಶಾದಲ್ಲಿ ಕಳೆದ ಮೂರು ವರ್ಷದಲ್ಲಿ ಸುಮಾರು 4,689 ಮಂದಿ ವಿವಿಧ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ.

ಆದ್ರೆ ಬರೀ ಹಾವು ಕಚ್ಚಿ ಸಾವನ್ನಪ್ಪಿದವರ ಸಂಖ್ಯೆ 1,716 ರಷ್ಟಿದೆ ಅಂತಾ ಡೆಪ್ಯೂಟಿ ಸ್ಪೆಷಲ್ ರಿಲೀಫ್ ಕಮೀಷನ್ ಮೋಹಪಾತ್ರ ತಿಳಿಸಿದ್ದಾರೆ. ಹೀಗಾಗಿ ಒಡಿಶಾ ರಾಜ್ಯ ಸರ್ಕಾರ ಹಾವು ಕಚ್ಚುವುದು ಒಂದು ವಿಪತ್ತು ಅಂತಾ ಘೋಷಿಸಿದ್ದು, ಹಾವು ಕಚ್ಚಿ ಸತ್ತ ವ್ಯಕ್ತಿಗಳ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದೆ.

ಇನ್ನು ಹಾವು ಕಚ್ಚಿ ಸತ್ತವರಲ್ಲಿ ಹೆಚ್ಚಾಗಿ ರೈತರು, ಬಡವರು, ಮತ್ತು ಹಳ್ಳಿಯ ಮಹಿಳೆಯರೇ ಆಗಿದ್ದಾರೆ. 1,716 ಹಾವು ಕಚ್ಚಿ ಸತ್ತ ಪ್ರಕರಣಗಳಲ್ಲಿ ಶೇಕಡಾ 97 ಮಂದಿ ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ. ಒಡಿಶಾದ 30 ಜಿಲ್ಲೆಗಳಲ್ಲೂ ಹಾವು ಕಚ್ಚಿ ಸತ್ತ ಪ್ರಕರಣಗಳು ದಾಖಲಾಗಿವೆ. ಇದ್ರಲ್ಲಿ ಅತಿ ಹೆಚ್ಚು ಅಂದ್ರೆ 167 ಮಂದಿ ಹಾವು ಕಚ್ಚಿ ಸತ್ತಿದ್ದು ಬಲಸೂರ್ ಜಿಲ್ಲೆಯಲ್ಲಿ. ಹಾಗೆಯೆ ಗಂಜಂಮ್ ಜಿಲ್ಲೆಯ 147 ಮಂದಿ, ಕೆಂಜೆಹಾರ್ ಮತ್ತು ಮಯೂರ್ ಬಂಜ್ ಜಿಲ್ಲೆಗಳಲ್ಲಿ ತಲಾ 145 ಮಂದಿ, ಭದ್ರಕಾ ಜಿಲ್ಲೆಯಲ್ಲಿ 114 ಮಂದಿ ಹಾವು ಕಚ್ಚಿ ಸತ್ತಿದ್ದಾರೆ ಎಂದು ಎಸ್ ಆರ್ ಒ ಮತ್ತು ಒ ಎಸ್ ಡಿ ಎಂ ಎ ವರದಿ ಮಾಡಿವೆ.

ಇನ್ನು ಹಾವು ಕಡಿತಕ್ಕೆ ಔಷಧಿಯನ್ನು ಒಡಿಶಾದ ಎಲ್ಲಾ ಆಸ್ಪತ್ರೆಗಳಲ್ಲೂ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರತಾಪ್ ಜೆನಾ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...