alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೆ ಕಾರಣವಾಯ್ತು ಹುಡುಗರ ಹುಡುಗಾಟಿಕೆ

accident 5689ವಾರಾಂತ್ಯದ ಮಸ್ತಿ ಮಾಡಲು ಹೋದ ಹುಡುಗರ ತಂಡವೊಂದು ಕಾರ್ ರೇಸ್ ಗೆ ಮುಂದಾದ ವೇಳೆ ನಿಯಂತ್ರಣ ತಪ್ಪಿ 17 ವರ್ಷದ ಹುಡುಗನೊಬ್ಬ ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಜೈಪುರದ ಬಿರ್ಲಾ ಮಂದಿರದಿಂದ ಇವರುಗಳು 20 ಕಿ.ಮೀ. ನೇರ ರಸ್ತೆಯಲ್ಲಿ ಕಾರ್ ರೇಸ್ ಮಾಡಲು ಮುಂದಾಗಿದ್ದು, ಈ ವೇಳೆ ಭೀಲ್ವಾ ಸಮೀಪದ ಶಿವದಾಸಪುರ ಏರಿಯಾದಲ್ಲಿ ಲೂವ್ ತ್ರಿಲೋಕನಿ ಎಂಬಾತನ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ. ಇದರಿಂದ ಲೂವ್ ತ್ರಿಲೋಕನಿ ಮತ್ತು ಉತ್ಕರ್ಶಾ ಗಾಯಗೊಂಡಿದ್ದಾರೆ.

ಕೂಡಲೇ ಅವರುಗಳನ್ನು ಎಸ್ಎಂಎಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ 17 ವರ್ಷದ ಲೂವ್ ತ್ರಿಲೋಕನಿ ಶನಿವಾರದಂದು ಸಾವನ್ನಪ್ಪಿದ್ದು, ಉತ್ಕರ್ಶಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ ರೇಸ್ ಮಾಡುತ್ತಿದ್ದ ಇತರೆ ಹುಡುಗರ ಮೇಲೂ ಕೇಸ್ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...